ರಾಜ್ಯ

ನವಶಿಲಾಯುಗದ ಆಯುಧಗಳು ಪತ್ತೆ

ನವಶಿಲಾಯುಗದಲ್ಲಿ ಮಾನವರು ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ಆಯುಧಗಳು ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿವೆ. ತೀರ್ಥಹಳ್ಳಿ ತಾಲೂಕಿನ ಕಟಗಾರುಗ್ರಾಮದ ಕಟ್ಟೆಹಣ್ಣು ಸಮೀಪ ಹರಿಯುವ ತುಂಗಾನದಿಯ ಉಪನದಿಯ ದಡದ ಮೇಲೆ ನವಶಿಲಾಯುಗದ ಕುರುಹು ಹಾಗೂ ಹಲವು ಆಯುಧಗಳನ್ನು ಪತ್ತೆಹಚ್ಚಲಾಗಿದೆ. ನವಶಿಲಾಯಗದ ಮಾನವ ಇಂತಹ ಅಪರೂಪದ ಆಯುಧಗಳನ್ನು ಬೇಟೆಯಾಡಲು ಮತ್ತು ಇತರ ಉದ್ದೇಶಗಳಿಗಾಗಿ ಬಳಸುತ್ತಿದ್ದರು. ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೇ ಅವುಗಳನ್ನು ಉಪಯೋಗಿಸಲಾಗುತ್ತಿತ್ತು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ದೊರೆತಿರುವ ಆಯುಧಗಳು ವಿವಿಧ ವಿನ್ಯಾಸ ಮತ್ತು ಗಾತ್ರದಲ್ಲಿವೆ. ಒಂದು ಕಪ್ಪುಮಚ್ಚು ತೀರಗಡುಸಾದ ಶಿಲೆಯಿಂದ ಮಾಡಿದ್ದಾಗಿದೆ. ಮೂವತ್ತು ಸೆಂಟಿಮೀಟರ್ ಉದ್ದವಿದ್ದು ಕೈಯಲ್ಲಿ ಹಿಡಿಯುವ ಹಿಡಿಯಿದೆ. ಒಂದು ಕೊಡಲಿ ದೊರೆತಿದ್ದು ಎರಡು ಕಡೆ ಉಜ್ಜಿರುವ ಗುರುತಿದೆ. ಎರಡು ಉಂಗುರ ಕಲ್ಲುಗಳು ದೊರೆತಿದ್ದು ತಲಾ ನಾಲ್ಕುಕೆ.ಜಿ.ಯಷ್ಟು ಭಾರವಾಗಿವೆ. ಇಂತಹ ಕಲ್ಲುಗಳ ರಂಧ್ರದಲ್ಲಿ ಉದ್ದನೆಯ ಕೋಲನ್ನು ಗಟ್ಟಿಯಾಗಿ ಸಿಕ್ಕಿಸಲಾಗುತಿತ್ತು. ಇದೇ ಪರಿಸರದಲ್ಲಿ ಬಂಡೆಗಳ ಮೇಲೆ ಬಿಡಿಸಿದ ರೇಖಾಚಿತ್ರಗಳಿವೆ.

About the author

ಕನ್ನಡ ಟುಡೆ

Leave a Comment