ಸಿನಿ ಸಮಾಚಾರ

ಹೈದರಾಬಾದ್: ನಾಗರಹಾವು, ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ

ಹೈದರಾಬಾದ್: ನಾಗರಹಾವು ಹಾಗೂ ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಹಾಗೂ ನಟ ಕೋಡಿ ರಾಮಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಗಚಿಬೌಲ್‍ನ ಎಐಜಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದ ರಾಮಕೃಷ್ಣ ಅವರು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪಾಕಕೋಳ್ಳುನಲ್ಲಿ ಜನಿಸಿದ್ದ ಕೋಡಿ ರಾಮಕೃಷ್ಣ ಅವರು 1982 ರಲ್ಲಿ ಮೊದಲ ಬಾರಿಗೆ ‘ಇಂಟ್ಲೋ ರಾಮಾಯ್ಯ ವೀದಿಲೋ ಕೃಷ್ಣಯ್ಯ’ ಚಿತ್ರವನ್ನು ನಿರ್ದೇಶನವನ್ನು ನಿರ್ದೇಶಿಸಿದರು. 30 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, ‘ಅಂಜಿ’, ‘ಭಾರತ್ ಬಂಧ್’, ‘ಶ್ರೀನಿವಾಸ ಕಲ್ಯಾಣಂ’ ಸೇರಿದಂತೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ತೆಲುಗು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 2012 ರಲ್ಲಿ  ‘ರಘುಪತಿ ವೆಂಕಯ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. 2014 ರಲ್ಲಿ ತೆರೆ ಕಂಡ ಭಕ್ತಿಪ್ರಧಾನ ಚಿತ್ರ ‘ಅವತಾರಂ’ ರಾಮಕೃಷ್ಣ ನಿರ್ದೇಶನದ ಕೊನೆಯ ಚಿತ್ರವಾಗಿತ್ತು. ಚಲನಚಿತ್ರ ನಿರ್ದೇಶನ ಮಾತ್ರವಲ್ಲದೆ, ರಾಮಕೃಷ್ಣ ಅವರು, ‘ದೊಂಗಾಟ’, ‘ಆಸ್ತಿ ಮೂರೇಡು, ಆಸಾ  ಬಾರೇಡು’, ‘ಅತ್ತಗಾರು ಸ್ವಾಗತಂ’, ‘ಇಂಟಿ ದೊಂಗ’ ಮತ್ತು ‘ಮೂಡಿಳ್ಳು ಮುಚ್ಚಟಾ’ ಮುಂತಾದ ಚಿತ್ರಗಳಲ್ಲೂ ಅಭಿನಯಿಸಿದ್ದರು.

About the author

ಕನ್ನಡ ಟುಡೆ

Leave a Comment