ರಾಷ್ಟ್ರ ಸುದ್ದಿ

ನಾಗರಿಕ ಸೇವಾ ಪರೀಕ್ಷೆಯ ವಯಸ್ಸಿನ ಗರಿಷ್ಠ ಮಿತಿ 27ಕ್ಕೆ ಇಳಿಸಿ: ನೀತಿ ಆಯೋಗ

ಹೊಸದಿಲ್ಲಿ: ನಾಗರಿಕ ಸೇವಾ ಪರೀಕ್ಷೆಗಳಿಗೆ ವಯಸ್ಸಿನ ಮಿತಿಯನ್ನು 30 ರಿಂದ 27ಕ್ಕೆ ಇಳಿಸಿ ಎಂದು ಕೇಂದ್ರ ಸರಕಾರದ ವಿಚಾರ ವೇದಿಕೆಯಾಗಿರುವ ನೀತಿ ಆಯೋಗ ನೀತಿ ಆಯೋಗಸಲಹೆ ನೀಡಿದೆ. ಸದ್ಯ ಸಾಮಾನ್ಯ ವರ್ಗದವರಿಗೆ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು 30 ವರ್ಷದವರಿಗೆ ಅವಕಾಶವಿದೆ. ಇದನ್ನು 2022 – 23ರವರ ವೇಳೆಗೆ ಹಂತ ಹಂತವಾಗಿ 27ಕ್ಕೆ ಇಳಿಸಿ ಹಾಗೂ ಎಲ್ಲ ಸೇವಾ ಪರೀಕ್ಷೆಗಳಿಗೂ ಒಂದೇ ಸಂಯೋಜಿತ ಪರೀಕ್ಷೆ ನಡೆಸುವಂತೆಯೂ ನೀತಿ ಆಯೋಗ ಸಲಹೆ ನೀಡಿದೆ.

ಎಲ್ಲ ನೇಮಕಾತಿಗಳಿಗೆ ಕೇಂದ್ರೀಕೃತ ಪ್ರತಿಭೆ ಸಂಗ್ರಹವೊಂದನ್ನು ಸ್ಥಾಪನೆ ಮಾಡಿ ಎಂದು ಶಿಫಾರಸು ಮಾಡಿದ್ದು, ಈ ಮೂಲಕವೇ ಖಾಲಿ ಇರುವ ಹುದ್ದೆಗಳ ಕೆಲಸದ ವಿವರಗಳು ಹಾಗೂ ಸ್ಪರ್ಧಾಕಾಂಕ್ಷಿಗಳ ಸಾಮರ್ಥ್ಯ ಹೊಂದಿಕೆಯಾಗುವ ರೀತಿ ಅಭ್ಯರ್ಥಿಗಳಿಗೆ ಹುದ್ದೆ ನೀಡಿ ಎಂದು ಸಹ ನೀತಿ ಆಯೋಗ ತಿಳಿಸಿದೆ. ಅಲ್ಲದೆ, ನಾಗರಿಕ ಸೇವೆಗಳ ಸಂಖ್ಯೆಯನ್ನು ತರ್ಕಬದ್ಧಗೊಳಿಸುವಿಕೆ ಹಾಗೂ ಸಾಮರಸ್ಯದ ಮೂಲಕ ಕಡಿಮೆ ಮಾಡಿ ಎಂದು ”ನವಭಾರತಕ್ಕಾಗಿ ಹೊಸ ತಂತ್ರ @75”ಎಂಬ ವರದಿಯಲ್ಲಿ ತಿಳಿಸಿದೆ.

ಸದ್ಯ, ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ 60ಕ್ಕೂ ಹೆಚ್ಚು ನಾಗರಿಕ ಸೇವೆಗಳು ಲಭ್ಯವಿದೆ. ಪ್ರಸ್ತುತ ನೇಮಕದ ಸರಾಸರಿ ವಯಸ್ಸು 25 ಹಾಗೂ ಅರ್ಧ ಇದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಜನಸಂಖ್ಯೆಯ ಶೇಕಡಾ ಮೂರರಲ್ಲಿ ಒಬ್ಬರಷ್ಟಕ್ಕಿಂತ ಅಧಿಕ 35 ವರ್ಷಕ್ಕೂ ಕಡಿಮೆ ವಯಸ್ಸಿನವರು ಇದ್ದಾರೆ. ಜತೆಗೆ, ಲ್ಯಾಟರಲ್ ಎಂಟ್ರಿ ಮೂಲಕ ಸರಕಾರದ ಉನ್ನತ ಮಟ್ಟಗಳಲ್ಲಿ ತಜ್ಞರ ನೇಮಿಸಲು ನೀತಿ ಆಯೋಗ ಶಿಫಾರಸು ಮಾಡಿದೆ. ಅವರ ಶಿಕ್ಷಣ ಹಾಗೂ ಕುಶಲತೆಗೆ ತಕ್ಕಂತೆ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಮೂಲಕ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ಪ್ರಮುಖ ವಿಧಾನ. ಅಲ್ಲದೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅಧಿಕಾರಿಗಳ ಅನುಭವದ ಆಧಾರದ ಮೇರೆಗೆ ದೀರ್ಘಾವಧಿಗಳ ಕಾಲ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ಅಗತ್ಯಕ್ಕಿಂತ ಅಧಿಕ ಅಧಿಕಾರಿಗಳು ಇರುವ ವಲಯಗಳಲ್ಲಿರುವವರನ್ನು ಉದಯೋನ್ಮುಖವಾಗಿ ಪ್ರಾಮುಖ್ಯತೆ ಇರುವ ವಲಯಗಳಿಗೆ ವರ್ಗಾವಣೆ ಮಾಡಬೇಕು ಎಂದು ನೀತಿ ಆಯೋಗದ ವರದಿ ಹೇಳಿದೆ.

About the author

ಕನ್ನಡ ಟುಡೆ

Leave a Comment