ರಾಷ್ಟ್ರ

ನಾಗಾಲ್ಯಾಂಡ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

 

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಾಗಾಲ್ಯಾಂಡ್ ಯುವತಿಯನ್ನು ಕರೆತಂದು ವಂಚಿಸಿದ ವ್ಯಕ್ತಿಯೊಬ್ಬ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.ವಾಹೆಂಗ್ ಬಾಮ್ ಲಲಿತ್ ಎಂಬಾತನೇ ಲೈಂಗಿಕ ಕಿರುಕುಳ ನೀಡಿದ ಆರೋಪಿ. 2 ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಪರಿಚಯಿಸಿಕೊಂಡ ಲಲಿತ್ ಹೆಚ್.ಎಸ್.ಆರ್. ಲೇಔಟ್ ನಲ್ಲಿರುವ ತನ್ನ ಮನೆಯಲ್ಲಿರಿಸಿಕೊಂಡಿದ್ದಾನೆ.

ಕೆಲಸ ಹುಡುಕಿಕೊಂಡು 2015 ರ ಮೇ ನಲ್ಲಿ  ನಗರಕ್ಕೆ  ಬಂದಿದ್ದ 26 ವರ್ಷದ ಯುವತಿಗೆ ಎಚ್ಎಸ್ಆರ್ ಲೇಔಟ್ ನಿವಾಸಿ ರಾಂಗ್ ಸೇನಕಲ್ ಎಂಬಾಕೆಯ ಪರಿಚಯವಾಗಿತ್ತು.  ಬ್ಯೂಟಿ ಪಾರ್ಲರ್ ನಲ್ಲೆ ಕೆಲಸ ಕೊಡಿಸುತ್ತೇನೆ ಸ್ವಲ್ಪ ದಿನ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರು ಎಂದು ಹೇಳಿದ್ದರು.

ಕೆಲಸ ಕೊಡಿಸದೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.  ಇದುವರೆಗೂ ದಂಪತಿಯನ್ನು ಬಂಧಿಸಿಲ್ಲ ನೊಂದ ಯುವತಿ ಹೇಗೋ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾಳೆ. ಅದಾದ ನಂತರ ಆಕೆ ನಾಗಲ್ಯಾಂಡ್ ಗೆ ತೆರಳಿದ್ದಳು. ನಂತರ ಮಹಿಳಾ ಹಕ್ಕು ಸಂಘಟನೆಗೆ ದೂರು ನೀಡಿದ್ದರು. ಅವರು ವಿವೇಕನಗರ ಪೊಲೀಸ್ ಠಾಣೆಗೆ ಈ ಕೇಸ್ ವರ್ಗಾಯಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಯುವತಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ. ಜೊತೆಗೆ ಮನೆ ಕೆಲಸ ಮಾಡಿಕೊಂಡ ದಂಪತಿ ಯುವತಿಗೆ ಆರು ತಿಂಗಳ ಸಂಬಳ ಕೂಡ ನೀಡಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

 

About the author

ಕನ್ನಡ ಟುಡೆ

Leave a Comment