ಪರಿಸರ

ನಾಗ್ಪುರದಲ್ಲಿ ಜಡಿ ಮಳೆ

ನಾಗ್ಪುರ : ಕಳೆದ ಎರಡು ದಿನಗಳಿಂದ  ಇಲ್ಲಿ ಜಡಿ ಮಳೆ ಆಗುತ್ತಿದ್ದು ಇಂದು ಶನಿವಾರ ಕೂಡ ಮಳೆ ಅಬ್ಬರ ನಿಂತಿಲ್ಲ. ಹಾಗಾಗಿ ನಾಗ್ಪುರ ಬಹುಭಾಗಗಳು ಈಗ ನೆರೆಯಲ್ಲಿ ಮುಳುಗಿವೆ. ನಗರದ ರಸ್ತೆಗಳೆಲ್ಲ ನೆರೆ ಉಂಟಾಗಿದ್ದು ಕಾರುಗಳು ನೀರಿನಲ್ಲಿ ಮುಕ್ಕಾಲು ಅಂಶ ಮುಳುಗಿವೆ.

ಶಾಲೆ ಕಾಲೇಜುಗಳಿಗೆ ಇಂದು ಶನಿವಾರ ರಜೆ ಸಾರಲಾಗಿದೆ. ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡಿರುವ ಜಡಿ ಮಳೆ ಕಳೆದ 24 ತಾಸುಗಳಲ್ಲಿ ಇಲ್ಲಿ 282 ಎಂಎಂ ಪ್ರಮಾಣದಲ್ಲಿ ಬಿದ್ದಿದೆ. ನಿನ್ನೆ  ಬೆಳಗ್ಗೆ 8.30ರಿಂದ ಮಧ್ಯಾಹ್ನ  2.30ರ ವರೆಗಿನ ಕೇವಲ ಆರು ತಾಸುಗಳಲ್ಲೇ 260 ಎಂಎಂ ಮಳೆ ಆಗಿದೆ.

ಜಡಿ ಮಳೆ, ನೆರೆಯಿಂದಾಗಿ ಮಹರಾಷ್ಟ್ರದ ವಿಧಾಸಭಾ ಕಲಾಪವನ್ನು ನಿನ್ನೆ ದಿನದ ಮಟ್ಟಿಗೆ ಮುಂದೂಡಲಾಗಿತ್ತು.

About the author

ಕನ್ನಡ ಟುಡೆ

Leave a Comment