ರಾಜ್ಯ ಸುದ್ದಿ

ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ: ಬಿವಿ ಕಾರಂತರ ಒಡನಾಡಿ ಗಂಗಾಧರಸ್ವಾಮಿಗೆ ಜೀವಮಾನದ ಗೌರವ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಹಿರಿಯ ರಂಗಕರ್ಮಿ  ಬಿ.ವಿ.ಕಾರಂತರ ಒಡನಾಡಿ ಪಿ.ಗಂಗಾಧರಸ್ವಾಮಿ ಅವರಿಗೆ ಜೀವಮಾನ ಸಾಧನೆ ಗೌರವ ಪುರಸ್ಕಾರ ಲಭಿಸಿದೆ.ಉಡುಪಿಯ ಹಿರಿಯ ರಂಗಸಾಧಕ ಟಿ.ಪ್ರಭಾಕರ್‌ ಕಲ್ಯಾಣಿ, ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗನಿರ್ದೇಶಕಿ ಮತ್ತು ನಟಿ ಉಷಾ ಭಂಡಾರಿ ಸೇರಿ 24 ಮಂದಿಗೆ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಕನ್ನಡ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಪ್ರಶಸ್ತಿ ಪುರಸ್ಕೃತರ ಹೆಸರನ್ನ್ಯು ಘೋಷಿಸಿದ್ದಾರೆ. ಜೀವಮಾನ ಸಾಧನೆ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫ‌ಲಕವನ್ನು ಹೊಂದಿದೆ.ವಾರ್ಷಿಕ ಪ್ರಶಸ್ತಿಗಳು  25 ಸಾವಿರ ರೂ.ನಗದು ಮತ್ತು ಫ‌ಲಕ, ದತ್ತಿ ಪ್ರಶಸ್ತಿಗಳು 5 ಸಾವಿರ ರೂ.ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರಲಿದೆ. 2019ರ ಫೆಬ್ರವರಿಯಲ್ಲಿ ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.
ಪಿ. ಗಂಗಾಧರಸ್ವಾಮಿ ಪರಿಚಯ: ಗದಗ ಜಿಲ್ಲೆ ಮುಂಡರಗಿಯವರಾದ ಗಂಗಾಧರಸ್ವಾಮಿ ಬೆಂಗಳೂರು ವಿಶ್ವವಿದ್ಯಾನಿಕಯದಿಂದ ನಾಟಕದ ವಿಚಾರದಲ್ಲಿ ಪದವಿ ಪಡೆದಿದ್ದಾರೆ.ಬೆಂಗಳೂರಿನ ಆದರ್ಶ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ರಂಗಶಿಕ್ಷಕರಾಗಿ ವೃತ್ತಿ ಬದುಕು ಪ್ರಾರಂಭಿಸಿದ್ದ ಗಂಗಾಧರಸ್ವಾಮಿ ಹೆಗ್ಗೋಡಿನ “ನೀನಾಸಂ” ಗೆ ಪ್ರಥಮ ಪ್ರಾಂಶುಪಾಲರಾಗಿದ್ದವರು.೧೯೮೯ರಿಂದ ಮೈಸೂರಿನ ರಂಗಾಯಣದಲ್ಲಿ ಸೇವೆ ಶಿಕ್ಷಕರಾಗಿ ಸೇವೆಗೆ ನಿಂತ ಇವರು ಧಾರವಾಡದ ರಂಗಾಯಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನ್ನಿವೃತ್ತರಾದರು. ಅಲ್ಲದೆ ಇವರು ಸಮುದಾಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು ರಾಜ್ಯಾದ್ಯಂತ ನಡೆದ ರಂಗ ಶಿಬಿರಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪೂರ್ಣ ವಿವರ ಹೀಗಿದೆ : ಡಿ.ಎಲ್‌.ನಂಜುಂಡಸ್ವಾಮಿ(ತುಮಕೂರು), ಜಕಾವುಲ್ಲಾ (ಹಾಸನ), ಪ್ರಭಾಕರ ಜೋಷಿ (ಕಲಬುರ್ಗಿ), ವಿಜಯಾನಂದ ಕರಡಿಗುಡ್ಡ (ರಾಯಚೂರು),ಖಾಜೇಸಾಬ ಜಂಗಿ (ಬಾಗಲಕೋಟೆ), ಬಸಪ್ಪ ಮದರಿ (ವಿಜಯಪುರ), ಎಂ.ರವಿ (ಬೆಂಗಳೂರು), ಜಗದೀಶ್‌ ಕೆಂಗನಾಳ(ಬೆಂಗಳೂರು ಗ್ರಾಮಾಂತರ), ಕಿರಗಸೂರು ರಾಜಪ್ಪ (ಚಾಮರಾಜನಗರ), ಟಿ.ಪ್ರಭಾಕರ ಕಲ್ಯಾಣಿ (ಉಡುಪಿ), ಎಸ್‌.ಆಂಜಿನಮ್ಮ(ಬಳ್ಳಾರಿ), ಸಾವಿತ್ರಿ ನಾರಾಯಣಪ್ಪ ಗೌಡರ (ಗದಗ), ಮಕ್ಕಮ್ಮಲ್‌ ಹುಣಸಿಕಟ್ಟಿ (ಬೆಳಗಾವಿ), ಹನುಮಂತಪ್ಪ ಬಾಗಲಕೋಟಿ(ಚಿತ್ರದುರ್ಗ), ಡಾ.ಕೆ.ವೈ.ನಾರಾಯಣ ಸ್ವಾಮಿ (ಕೋಲಾರ), ಉಷಾ ಭಂಡಾರಿ (ದಕ್ಷಿಣ ಕನ್ನಡ), ಡಿ.ಎಂ.ರಾಜಕುಮಾರ್‌(ಶಿವಮೊಗ್ಗ), ಅಂಜಿನಪ್ಪ (ದೊಡ್ಡಬಳ್ಳಾಪುರ), ಹುಲಿವಾನ ಗಂಗಾಧರಯ್ಯ (ತುಮಕೂರು), ಮೋಹನ್‌ ಮಾರ್ನಾಡು ( ಮುಂಬಯಿ),ಕೆಂಚೇಗೌಡ ಟಿ (ಮಂಡ್ಯ), ಮೈಮ್‌ ರಮೇಶ್‌ ( ಮೈಸೂರು), ಚಿಂದೋಡಿ ಚಂದ್ರಧರ (ದಾವಣಗೆರೆ) ಮತ್ತು ಈಶ್ವರದಲಾ (ತುಮಕೂರು).

About the author

ಕನ್ನಡ ಟುಡೆ

Leave a Comment