ರಾಷ್ಟ್ರ ಸುದ್ದಿ

ನಾನು ಪ್ರಚಾರಕ್ಕಿಳಿದರೆ ಕಾಂಗ್ರೆಸ್ ಸೋಲು ಕಾಣಲಿದೆ: ದಿಗ್ವಿಜಯ್ ಸಿಂಗ್ ಗೊಂದಲಕರ ಹೇಳಿಕೆ

ನವದೆಹಲಿ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ನಡುವಲ್ಲೇ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಗೊಂದಲಕರವಾದ ಹೇಳಿಕೆಯೊಂದನ್ನು ನೀಡಿದ್ದಾರೆ.
ಕಾಂಗ್ರೆಸ್ ಪರವಾಗಿ ನಾನು ಪ್ರಚಾರ ನಡೆಸಿದರೆ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿದರೆ ಪಕ್ಷ ಸೋಲು ಕಾಣಲಿದೆ ಎಂದು ಹೇಳಿದ್ದಾರೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ಪಕ್ಷದಿಂದ ಯಾರಿಗೇ ಟಿಕೆಟ್ ದೊರೆತರೂ, ಶತ್ರುಗಳಿಗೇ ಟಿಕೆಟ್ ದೊರೆತರೂ ಕೂಡ ಅವರನ್ನು ಗೆಲ್ಲಿಸಿ. ಪ್ರಚಾರ ಮಾಡದಿರುವುದು, ಭಾಷಣ ಮಾಡದೇ ಇರುವುದಷ್ಟೇ ನನ್ನ ಕೆಲಸ. ನಾನು ಭಾಷಣ ಮಾಡುವುದರಿಂದ ಕಾಂಗ್ರೆಸ್’ಗೆ ಅಲ್ಪ ಮತಗಳು ಬೀಳುತ್ತವೆ. ಹೀಗಾಗಿ ನಾನು ಭಾಷಣ, ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕಮಲ್ ನಾಥ್ ಅವರು, ಯಾವ ಸಂದರ್ಭದಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆಂಬುದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment