ರಾಜಕೀಯ

ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರದಿದ್ರೆ ನಿಮಗೇನು ತೊಂದರೆ : ಸಚಿವ ಸಂತೋಷ್​ ಲಾಡ್​

ಹುಬ್ಬಳ್ಳಿ: ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರೊಲ್ಲ. ನಾನು ಬರದಿದ್ರೆ ನಿಮಗೇನು ತೊಂದರೆ ಎಂದು ಕಲಘಟಗಿ ವಿಧಾಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಚಿವ ಸಂತೋಷ್​ ಲಾಡ್​ ಕಾರ್ಯಕರ್ತರ ಪ್ರಶ್ನೆಗೆ ದರ್ಪದಿಂದ ಉತ್ತರಿಸಿದ್ದಾರೆ.

ಕಲಘಟಗಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ನೀವು ಐದು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಬಂದರೆ ಕಷ್ಟ ಎಂದು ಪ್ರಶ್ನಿಸಿದರು. ಇದಕ್ಕೆ ಉದ್ಧಟತನದಿಂದ ಪ್ರತಿಕ್ರಿಯಿಸಿದ ಲಾಡ್​ ನಿನ್ನ ಸಮಸ್ಯೆಗಳ ಪಟ್ಟಿ ಕೊಡು, ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಧಿಮಾಕಿನಿಂದ ಉತ್ತರಿಸಿದ್ದಾರೆ. ಸಂತೋಷ್​ ಲಾಡ್​ ಉದ್ಧಟತನದ ಉತ್ತರ ಕಂಡು ಕಾರ್ಯಕರ್ತರು ದಂಗಾಗಿದ್ದಾರೆ. ಸಂತೋಷ್​ ಲಾಡ್​ ಕಾರ್ಯಕರ್ತರಿಗೆ ಗದರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

About the author

ಕನ್ನಡ ಟುಡೆ

Leave a Comment