ಕ್ರೀಡೆ

ನಾನು ಯೋಗ್ಯನೆ, ತನ್ನನ್ನು ಟೀಕಿಸುವವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾದ ಆಲ್ರೌಂಡರ್ ಖ್ಯಾತಿಯ ಹಾರ್ದಿಕ್ ಪಾಂಡ್ಯ ತಮ್ಮ ವಿರುದ್ಧ ಮಾತನಾಡುವವರ ವಿಚಾರವಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕಳೆದ ಏಷ್ಯಾ ಕಪ್ ನಲ್ಲಿ ಗಾಯಗೊಂಡು ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯರ ಪ್ರದರ್ಶನದ ಕುರಿತಂತೆ ಕ್ರಿಕೆಟ್ ದಿಗ್ಗಜರಾದ ಸುನೀಲ್ ಗವಾಸ್ಕರ್ ಹಾಗೂ ಮೈಕೆಲ್ ಹೊಲ್ಡಿಂಗ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಾಂಡ್ಯ ನನ್ನ ಬಗ್ಗೆ ಟೀಕಿಸುವವರು ಎಷ್ಟು ಬೇಕಾದರೂ ಮಾತನಾಡಲಿ. ಅವರು ಮಾಡುವ ಟೀಕೆಗೆ ನಾನು ಯೋಗ್ಯನೆ ಎಂದಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಸುನೀಲ್ ಗವಾಸ್ಕರ್ ಪಾಂಡ್ಯರ ಆಲ್ರೌಂಡರ್ ಪಟ್ಟದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಪಾಂಡ್ಯ ಗವಾಸ್ಕರ್ ಅವರಿಗೆ ಕ್ರೀಡಾ ಲೋಕದಲ್ಲಿ ಸಾಕಷ್ಟು ಅನುಭವವಿದೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರ ಟೀಕೆಗೆ ನಾನು ಯೋಗ್ಯನೆ ಎಂದು ಹೇಳಿದ್ದಾರೆ.
ಇನ್ನು ಮುಂಬರುವ 2019ರ ವಿಶ್ವಕಪ್ ನಲ್ಲಿ ಆಡುವುದು ನನ್ನ ಗುರಿ. ಅದಕ್ಕಾಗಿ ಸಾಕಷ್ಟು ಅಭ್ಯಾಸ ಹಾಗೂ ಫಿಟ್ ನೆಸ್ ಕಾಪಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಫಿಟ್ ಆಗಿ ತಂಡಕ್ಕೆ ಮರಳುತ್ತೇನೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment