ಸಿನಿ ಸಮಾಚಾರ

ನಾನು ರಜಪೂತೆ, ನಿಮ್ಮನ್ನು ನಾಶ ಮಾಡುತ್ತೇನೆ: ಕರ್ಣಿ ಸೇನಾಗೆ ಕಂಗಣಾ ರಣಾವತ್ ಎಚ್ಚರಿಕೆ

ಮಣಿಕರ್ಣಿಕಾ ಸಿನಿಮಾದ ಬಗ್ಗೆ ಅಪಸ್ವರವೆತ್ತಿರುವ ಕರ್ಣಿ ಸೇನಾಗೆ  ರಣಾವತ್ ಎಚ್ಚರಿಕೆ ನೀಡಿದ್ದಾರೆ. ನಾನೂ ರಜಪೂತೆ, ಸಿನಿಮಾಗೆ ಸಂಬಂಧಪಟ್ಟಂತೆ ಕಿರುಕುಳ ನೀಡುವುದನ್ನು ಕರ್ಣಿ ಸೇನಾ ಮುಂದುವರೆಸಿದ್ದೇ ಆದರೆ ಕರ್ಣಿ ಸೇನಾವನ್ನು ನಾಶ ಮಾಡುತ್ತೇನೆ. ಎಂದು ಕಂಗನಾ ಎಚ್ಚರಿಸಿದ್ದಾರೆ. ನಾಲ್ವರು ಇತಿಹಾಸಕಾರರು ಮಣಿಕರ್ಣಿಕಾಗೆ ಪ್ರಮಾಣಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವೂ ಲಭ್ಯವಾಗಿದೆ. ಇದನ್ನು ಕರ್ಣಿ ಸೇನಾಗೂ ತಿಳಿಸಲಾಗಿದೆ. ಆದರೆ ನನಗೆ ಕಿರುಕುಳ ನೀಡುವುದನ್ನು ಮುಂದುವರೆಸಿದರೆ, ನಿಲ್ಲಿಸದಿದ್ದರೆ. ಅಲ್ಲಿರುವ ಪ್ರತಿಯೊಬ್ಬರನ್ನೂ ನಾನು ನಾಶ ಮಾಡುತ್ತೇನೆ ನಾನೂ ರಜಪೂತ್ ಎನ್ನುವ ಅರಿವಿರಲಿ, ಎಂದು ಹೇಳಿದ್ದಾರೆ.
ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಕಥೆಯನ್ನಾಧರಿಸಿ ಮಣಿಕರ್ಣಿಕಾ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸಿನಿಮಾದಲ್ಲಿ ರಾಣಿ ಲಕ್ಷ್ಮಿ ಬಾಯಿ ಅವರಿಗೆ ಅವಮಾನ ಮಾಡಲಾಗಿದ್ದರೆ ಅಥವಾ ಅಲ್ಲಿ ಯಾವುದೋ ಬ್ರಿಟಿಷ್ ನ ಪ್ರೀತಿಸಿದ್ದಳು ಎಂಬಂತೆ ತೋರಿಸಿದ್ದರೆ, ಸಿನಿಮಾ ನಿರ್ದೇಶಕರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಹಾರಷ್ಟ್ರ ವಿಭಾಗದ ಕರ್ಣಿ ಸೇನಾ ಎಚ್ಚರಿಕೆ ನೀಡಿತ್ತು. ಪದ್ಮಾವತಿ ಚಿತ್ರಕ್ಕೂ ಕರ್ಣಿ ಸೇನಾ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ಕೆಲವು ಬದಲಾವಣೆಗಳನ್ನು ತರುವುದರಲ್ಲಿ ಯಶಸ್ವಿಯಾಗಿತ್ತು.

About the author

ಕನ್ನಡ ಟುಡೆ

Leave a Comment