ರಾಜಕೀಯ

ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತ ನೋಡಿದ ಸಿಎಂ ಮತ್ತು ಪುತ್ರ ಯತೇಂದ್ರ

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅವರನ್ನು ಕಣಕ್ಕಿಳಿಸಲಾಗಿದ್ದು ನಿನ್ನೆ ತಮ್ಮ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಹೋಗಿದ್ದರು. ಉಮೇದುವಾರಿಕೆ ಸಲ್ಲಿಕೆಗೆ ಅರ್ಜಿ ಭರ್ತಿ ಮಾಡಲು ಅವರು ಚುನಾವಣಾಧಿಕಾರಿ ಕಚೇರಿಯಲ್ಲಿ ಉತ್ತಮ ಸಮಯಕ್ಕಾಗಿ ಗಡಿಯಾರವನ್ನು ನೋಡುತ್ತಿದ್ದರು.ಸಂಪ್ರದಾಯದ ಮೇಲಿನ ಅವರ ನಂಬಿಕೆ ಅವರೊಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಲು ಎಲ್ಲಾ ಪಕ್ಷಗಳ ರಾಜಕಾರಣಿಗಳು ಒಳ್ಳೆಯ ಸಮಯಕ್ಕಾಗಿ ನೋಡುವುದು ಸಾಮಾನ್ಯವಾಗಿದೆ.

ನಿನ್ನೆ ವೈಶಾಖ ಮಾಸ ಪಂಚಮಿ ದಿನ ಉತ್ತಮವಾಗಿದೆ ಎಂದು ಹಲವು ಮುಖಂಡರು ನಾಮಪತ್ರ ಸಲ್ಲಿಸಿದರು. ದೇವರ ಮೇಲೆ ಭಾರೀ ನಂಬಿಕೆ ಹೊಂದಿಲ್ಲದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ನಿನ್ನೆ ನಾಮಪತ್ರ ಸಲ್ಲಿಕೆಗೆ ಮುನ್ನ ಮೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕೆ ಚುನಾವಣಾಧಿಕಾರಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ಅವರ ಊರ ದೇವರು ಸಿದ್ದರಾಮನಹುಂಡಿ, ಚಾಮುಂಡೇಶ್ವರಿ ದೇವಸ್ಥಾನ ಮತ್ತು ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.

 

 

About the author

ಕನ್ನಡ ಟುಡೆ

Leave a Comment