ಕ್ರೀಡೆ

ನಾಯಕನ ಚೊಚ್ಚಲ ಶತಕದ ನೆರವು, ಚೊಚ್ಚಲ ಏಕದಿನ ಸರಣಿ ಗೆದ್ದ ಕ್ರಿಕೆಟ್ ಶಿಶು ನೇಪಾಳ

ದುಬೈ: ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಿರುವ ಯುಎಇ ಹಾಗೂ ನೇಪಾಳ ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ನೇಪಾಳ ಚೊಚ್ಚಲ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ದುಬೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಯುಎಇ ತಂಡ 6 ವಿಕೆಟ್ ನಷ್ಟಕ್ಕೆ 254 ಗಳಿಸಿತ್ತು. 255 ರನ್ ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡದ ಪರ ನಾಯಕ ಪರಾಸ್ ಖಾಡ್ಕ(115) ಶತಕ ಸಿಡಿಸಿದ್ದ ನೇಪಾಳ 44.4 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 255 ರನ್ ಪೇರಿಸುವ ಮೂಲಕ ಗೆಲುವಿನ ನಗೆ ಬೀರಿತು. ಯುಎಇ ಪರ ರಿಜ್ವಾನ್ 45, ಶೈಮನ್ ಅನ್ವರ್ 87, ಮೊಹಮ್ಮದ್ ಬೊತಾ ಅಜೇಯ 59 ರನ್ ಪೇರಿಸಿದ್ದಾರೆ.
ನೇಪಾಳ ಪರ ಬೌಲಿಂಗ್ ನಲ್ಲಿ ಕರಣ್, ಖಾಡ್ಕ ತಲಾ 2 ವಿಕೆಟ್ ಪಡೆದರೆ, ಸಂಪಾಲ್ ಕಮಿ ಮತ್ತು ಲಮಿಚ್ಚನೆ ತಲಾ 1 ವಿಕೆಟ್ ಪಡೆದಿದ್ದಾರೆ. ನೇಪಾಳ ಪರ ಬ್ಯಾಟಿಂಗ್ ನಲ್ಲಿ ಮಲ್ಲ 31, ಪರಾಸ್ ಖಾಡ್ಕ 115, ಆರೀಫ್ ಶೇಕ್ ಅಜೇಯ 21 ಮತ್ತು ಸೊಂಪಾಲ್ ಕಮಿ ಅಜೇಯ 26 ರನ್ ಸಿಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment