ರಾಷ್ಟ್ರ

ನಾಲ್ಕು ತಿಂಗಳ ಹಸಿಗೂಸಿನ ಮೇಲೆ ಅತ್ಯಾಚಾರ ಮತ್ತು ಕೊಲೆ

ಮಧ್ಯಪ್ರದೇಶ:  ಮಧ್ಯಪ್ರದೇಶದಲ್ಲಿ ನಡೆದಿರುವ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. 4 ತಿಂಗಳ ಮಗುವನ್ನು ಅಪಹರಿಸಿದ ಶಿಶುಕಾಮಿಯೊಬ್ಬ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ರಾಜವಾಡ ಕೋಟೆ ಸಮೀಪ ಕಟ್ಟಡವೊಂದರಲ್ಲಿ ನೆಲಮಹಡಿಯಲ್ಲಿ ಮಗುವಿನ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿಯಿಂದ ಕಾಣೆಯಾಗಿದ್ದ 4 ತಿಂಗಳ ಹೆಣ್ಣು ಮಗು ಮಧ್ಯಾಹ್ನದ ವೇಳೆಗೆ ಶವವಾಗಿ ಪತ್ತೆಯಾಗಿದೆ.

ಮಗು ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಶೋಧ ನಡೆಸಿದ್ದ ಪೊಲೀಸರಿಗೆ ದಾರುಣ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು ಕಟ್ಟಡದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಮಗುವಿನ ಪೋಷಕರಿಗೆ ಪರಿಚಯಸ್ಥನೇ ಆಗಿರುವ ವ್ಯಕ್ತಿಯೊಬ್ಬ ಮಗುವನ್ನು ಅಪಹರಣ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಬಲೂನು ಮಾರುವವರಾಗಿದ್ದ ಪೋಷಕರಿಗೆ ರಾಜವಾಡ ಕೋಟೆ ಬಳಿಯ ಬೀದಿಯಲ್ಲಿ ಅ ಅವರು ವಾಸ ಮಾಡುತ್ತಿದ್ದರು. ರಾಜವಾಡ ಕೋಟೆ ಬಳಿ ಮಲಗಿದ್ದ ಪೋಷಕರ ಸಮೀಪವೇ ಇದ್ದ ಕಾಮುಕ ಬೆಳಿಗ್ಗೆ 5.30ರ ಸುಮಾರಿಗೆ ತಾಯಿಯ ಮಡಿಲಿನಿಂದ ಮಗುವನ್ನು ಅಪಹರಿಸಿದ್ದಾರನೆ. ನಂತರ ಸೈಕಲ್ ನಲ್ಲಿ 50 ಮೀಟರ್ ದೂರದಲ್ಲಿರುವ ಕಟ್ಟಡಕ್ಕೆ ಕರೆ ತಂದಿದ್ದಾನೆ. ನಂತರ ಮಗುವಿನ ಮೇಲೆ ಅತ್ಯಾಚಾರವೆಸಗಿ ಮಗುವಿನ ತಲೆಯನ್ನು ಬಡಿದು ಸಾಯಿಸಿದ್ದಾನೆಂದು ವರದಿಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment