ರಾಷ್ಟ್ರ ಸುದ್ದಿ

ನಾಲ್ಕು ವಾರದಲ್ಲಿ ರೂ.453 ಕೋಟಿ ಹಣ ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರಿಂ ಕೋರ್ಟ್ ಆದೇಶ

ನವದೆಹಲಿ: ಎರಿಕ್ಸನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆಯ ಅನಿಲ್‌ ಅಂಬಾನಿಗೆ  ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಮುಖಭಂಗವಾಗಿದೆ.
ಎರಿಕ್ಸನ್‌ ಗೆ  ರಿಲಾಯನ್ಸ್ ಗ್ರೂಪ್ 550 ಕೋಟಿ ರು. ಹಣ ನೀಡಬೇಕಾಗಿದ್ದು, ಕೂಡಲೇ  4 ವಾರದಲ್ಲಿ  ಹಣವನ್ನು ಪಾವತಿಸುವಂತೆ ಅನಿಲ್‌ ಅಂಬಾನಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ನಾಲ್ಕು ವಾರದಲ್ಲಿ  ರೂ.ಹಣ ಹಿಂದಿರುಗಿಸಿ ಅಥವಾ ಜೈಲು ಶಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಆದೇಶಿಸಿದೆ. ಎರಿಕ್ಸನ್‌ ಪ್ರಕರಣದಲ್ಲಿ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ಈ ಕೂಡಲೇ ಅವರು ಹಣ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿ ಉದ್ದೇಶಪೂರ್ವಕವಾಗಿ ಹಣ ಹಿಂದಿರುಗಿಸಿಲ್ಲ. ಈ ಹಿಂದೆ ಸೂಚನೆ ನೀಡಿದ್ದರು ಅದನ್ನು ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಪೀಠ ಗಮನ ಸೆಳೆದಿದೆ.

About the author

ಕನ್ನಡ ಟುಡೆ

Leave a Comment