ರಾಷ್ಟ್ರ ಸುದ್ದಿ

ನಾಳೆ ಅಖಿಲೇಶ್ ಯಾದವ್ ಬಿಎಸ್ ಪಿ ನಾಯಕಿ ಮಾಯಾವತಿ ಜಂಟಿ ಸುದ್ದಿಗೋಷ್ಟಿ: ಮೈತ್ರಿ ಘೋಷಣೆ ಸಾಧ್ಯತೆ

ಲಕ್ನೋ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಅಂದರೆ ಶನಿವಾರ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಬಿಎಸ್ ಪಿ ನಾಯಕಿ ಮಾಯಾವತಿ ಜಂಟಿ ಪತ್ರಿಕಾ ಗೋಷ್ಟಿ ನಡೆಸಲಿದ್ದು, ಚುನಾವಣೆ ಮೈತ್ರಿ ಘೋಷಿಸುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸೀಟುಗಳಿವೆ. ಎಸ್‌ಪಿ ಮತ್ತು ಬಿಎಸ್‌ಪಿ ಗೆ ಉತ್ತರ ಪ್ರದೇಶದಲ್ಲಿ ತಮ್ಮದೇ ಭದ್ರಕೋಟೆಗಳಿದ್ದು  ಅಲ್ಲಿನ ಸೀಟುಗಳನ್ನು ಪರಸ್ಪರರು ಬಾಚಿಕೊಳ್ಳುವ ಉದ್ದೇಶದಲ್ಲಿ ಅನ್ಯ ಎದುರಾಳಿ ಪಕ್ಷಗಳಿಗೆ ಮತ ಹರಿದು ಹೋಗುವುದನ್ನು ತಡೆಯುವ ರಣತಂತ್ರ ಇದಾಗಿದೆ. ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡು, ಗೆಲುವು ಸಾಧಿಸಿದ್ದವು, ಹೀಗಾಗಿ 2019ರ ಚುನಾವಣೆಯಲ್ಲೂ ಮಾತ್ರಿ ಮಾಡಿಗೆ ಸಿದ್ಧತೆ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ. ಎಸ್‌ಪಿ ಮತ್ತು ಬಿಎಸ್‌ಪಿಗೆ ಆರ್‌ಎಲ್‌ಡಿ (ರಾಷ್ಟ್ರೀಯ ಲೋಕ ದಳ) ಕೂಡ ಮಿತ್ರ ಪಕ್ಷವೇ ಆಗಿದೆ. ಆದರೆ ಅದಕ್ಕೆ ಹೆಚ್ಚೆಂದರೆ ಮೂರು ಸೀಟುಗಳನ್ನು ಮಾತ್ರವೇ ಬಿಟ್ಟುಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment