ರಾಜಕೀಯ

ನಾವು ಯಾರಿಗೂ ಮಂತ್ರಿಗಿರಿ ಭರವಸೆ ನೀಡಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ನಾವು ಯಾರಿಗೂ ಮಂತ್ರಿಗಿರಿ ಭರವಸೆ ನೀಡಿಲ್ಲ. ಸದ್ಯಕ್ಕೆ ಮಂತ್ರಿಮಂಡಲದಲ್ಲಿ ಬದಲಾವಣೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲರೂ ಭಾಗಿಯಾಗುತ್ತಾರೆ. ನಮ್ಮ ಪಕ್ಷದವರೂ ಬಿಜೆಪಿಗೆ ಹೋಗಲ್ಲ ಎಂದು ಆಪರೇಷನ್​ ಕಮಲದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಆಪರೇಷನ್ ಎಂಬ ಪದವನ್ನು ಪ್ರಾರಂಭಿಸಿದ್ದೇ ಯಡಿಯೂರಪ್ಪನವರು. ಪ್ರಜಾಪ್ರಭುತ್ವದಲ್ಲಿ ಇದೊಂದು ರೋಗ ಇದ್ದಹಾಗೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲ. ಇದು ಒಂದು ಅಸಹ್ಯ ರಾಜಕಾರಣ. ನಮ್ಮ ಪಕ್ಷದವರು ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದರು.ಇನ್ನು ಭಾರತೀಯ ಖರೀದಿದಾರಂತೂ ಇದನ್ನು ಲೇವಡಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment