ರಾಜ್ಯ ಸುದ್ದಿ

ನಿನ್ನೆ ರಾತ್ರಿ 12 ಗಂಟೆಗೆ ಯಡಿಯೂರಪ್ಪ ದೇವದುರ್ಗಕ್ಕೆ ಹೋಗಿದ್ದೇಕೆ: ಬಿಎಸ್ ವೈ ಆಡಿಯೋ ಕ್ಲಿಪ್ ಟ್ರೇಲರ್ ನಾನೇ ಮಾಡಿದ್ದು; ಮುಖ್ಯಮಂತ್ರಿ

ಬೆಂಗಳೂರು: ಯಡಿಯೂರಪ್ಪ ನಿನ್ನೆ ರಾತ್ರಿ 12 ಗಂಟೆಗೆ ದೇವದುರ್ಗಕ್ಕೆ ಹೋಗಿದ್ದರು, ನಾನು ಯಾರೋ ನಿಧನರಾಗಿದ್ದಾರೆ ಎಂದು ಭಾವಿಸಿದ್ದೆ, ದೇವದುರ್ಗ ಐಬಿಯಲ್ಲಿ ಯಾವ ಶಾಸಕರಿದ್ದರು ಎಂಬ ಬಗ್ಗೆ ನನಗೆ ಮಾಹಿತಿಯಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ,  ಪ್ರಧಾನಿ ನಮ್ಮ ರಾಜ್ಯದ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ, ಅದೆಷ್ಟೋ ಭಾಷಣಗಳನ್ನು ಮಾಡುತ್ತಾರೆ, ಸಂಸತ್ ನಲ್ಲಿ ನಿನ್ನೆ ಭ್ರಷ್ಟಾಚಾರ ತಡೆ ಹಾಗೂ ಕಪ್ಪು ಹಣದ ಬಗ್ಗೆ ಮಾತನಾಡುತ್ತಾರೆ, ಅವರಿಗೆ ಈಗ ಅಂಬೇಡ್ಕರ್ ನೆನಪಾಗಿದೆ ಎಂದು ವ್ಯಂಗ್ಯ ವಾಡಿದ್ದಾರೆ. ಭ್ರಷ್ಟಾಚಾರ ನಿಲ್ಲಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ, ದೇಗುಲ ಎಂದು ಸಂಸತ್ ನ ಮೆಟ್ಟಿಲುಗಳಿಗೆ ನಮಿಸುತ್ತಾರೆ ಆದರೆ ಸಂಸತ್ತಿನಲ್ಲಿ ತಪ್ಪು ಮಾಹಿತಿ ನೀಡುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಒಂದು ಕಡೆ ಭ್ರಷ್ಟಾಚಾರ ಕಪ್ಪು ಹಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಮತ್ತೊಂದೆಡೆ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮೋದಿ ತಮ್ಮ ಸಹಾಯ ನೀಡುತ್ತಿದ್ದಾರೆ, ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಆದರೆ ಇತ್ತಿಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ನಾನು ಸುದ್ದಿಗೋಷ್ಠಿ ನಡೆಯುವಂತೆ ಮಾಡಿವೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಸದಾನಂದ ಗೌಡ, ದಿ ಗ್ರೇಟ್ ಅಶೋಕ್ ಎನೆಲ್ಲಾ ಮಾತನಾಡಿದ್ದಾರೆ,  ನಾವು ವಿಪಕ್ಷದಲ್ಲಿದ್ದೇವೆ, ನಾವು ಸಂನ್ಯಾಸಿಗಳಲ್ಲ, ನಾವು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹೊರಟಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ, ಜನರಿಗೆ ಏನು ಹೇಳಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಕೂಗುತ್ತಾರೆ, ನಮ್ಮ ಪಕ್ಷ ಇವತ್ತಿಗೂ ಜೀವಂತವಾಗಿದೆ, ಯಡಿಯೂರಪ್ಪ ನಿನ್ನೆ ರಾತ್ರಿ 12 ಗಂಟೆಗೆ ದೇವದುರ್ಗಕ್ಕೆ ಹೋಗಿದ್ದರು, ನಾನು ಯಾರೋ ನಿಧನಾರಾಗಿದ್ದಾರೆ ಎಂದು ಭಾವಿಸಿದ್ದೆ,  ದೇವದುರ್ಗ ಐಬಿಯಲ್ಲಿ ಯಾವ ಶಾಸಕರಿದ್ದರು ಎಂಬ ಬಗ್ಗೆ ನನಗೆ ಮಾಹಿತಿಯಿದೆ.  2008ರಲ್ಲಿ ಬಿಜೆಪಿ ನಡೆಸಿದ್ದ ಅಪರೇಷನ್ ಕಮಲ ಚಾಳಿಯನ್ನು ಆ ಪಕ್ಷವು ಇನ್ನೂ ಬಿಟ್ಟಿಲ್ಲ ಎಂದು ದೂರಿದ್ದಾರೆ. ಗಲಾಟೆ ಮಾಡಿ ಆದರೆ ಬಜೆಟ್ ಮಂಡನೆಗೆ ಅಡ್ಡಿ ಮಾಡಬೇಡಿ – ಬಿ.ಜೆ.ಪಿ. ಶಾಸಕರಿಗೆ ಸಿ.ಎಂ. ಕುಮಾರಸ್ವಾಮಿ ಮನವಿ.ಮಾಡಿದರು,ಇದು ಸರಕಾರದ ಬಜೆಟ್ ಅಲ್ಲ. ನಾಡಿನ ಜನತೆಯ ಬಜೆಟ್.
ಬಜೆಟ್ ಗೆ ಮಾರ್ಚ್ 31ರೊಳಗೆ ಒಪ್ಪಿಗೆ ಪಡೆಯದಿದ್ದರೆ, ಯಾವ ರೀತಿ ಮುಂದಿನ ಸರ್ಕಾರ ನಡೆಯಬೇಕು. ಬಜೆಟ್ ಮಂಡನೆ ಮಾಡೋದು ಹುಡುಗಾಟಿಕೆಯಲ್ಲ. ಆದರೆ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ. ಬಿಜೆಪಿ ಗೋ ಬ್ಯಾಕ್ ಸಿಎಂ ಅಂತ ಹೇಳುತ್ತಿದೆ. ಸರ್ಕಾರಕ್ಕೆ ಬಹುಮತ ಇಲ್ಲ ಅಂತಾರೆ. ಆದರೆ ಅದನ್ನೂ ಮಾಡಲಾಗಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿದೆ.

About the author

ಕನ್ನಡ ಟುಡೆ

Leave a Comment