ರಾಷ್ಟ್ರ ಸುದ್ದಿ

ನಿಮ್ಮ ಕೈಲಾಗದಿದ್ದರೆ ಹೇಳಿ, ನಾವೇ ಉಗ್ರ ಮಸೂದ್ ಹಿಡಿಯುತ್ತೇವೆ: ಇಮ್ರಾನ್ ಗೆ ಪಂಜಾಬ್ ಸಿಎಂ ಎಚ್ಚರಿಕೆ

ಪಾಟಿಯಾಲಾ: ಪುಲ್ವಾಮ ಉಗ್ರ ದಾಳಿ ನಡೆಸಿದ ಜೈಶ್ ಸಂಘಟನೆಯ ಮುಖಸ್ಥ ಮಸೂದ್ ಅಜರ್ ನನ್ನು ನಿಮ್ಮ ಕೈಯಲ್ಲಿ ಹಿಡಿಯಲಾಗದಿದ್ದರೆ ಹೇಳಿ, ನಾವೇ ಅವನ ಹೆಡೆಮುರಿ ಕಟ್ಟುತ್ತೇವೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬಿಡುಗಡೆ ಮಾಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮರೀಂದರ್ ಸಿಂಗ್ ಅವರು, ಪುಲ್ವಾಮಾ ದಾಳಿಯಲ್ಲಿ ಜೈಷೆ ಉಗ್ರರ ಕೈವಾಡವಿಲ್ಲ ಎನ್ನುವ ನಿಮಗೆ ಇನ್ನೆಷ್ಟು ಪುರಾವೆಗಳು ಬೇಕು? ಹತ ಉಗ್ರರ ಮೃತ ದೇಹಗಳನ್ನು ಸಾಕ್ಷ್ಯವಾಗಿ ಕಳುಹಿಸಬೇಕೇ?,” ಎಂದು ಇಮ್ರಾನ್‌ ಅವರನ್ನು ಟ್ವಿಟರ್‌ನಲ್ಲಿ ಕ್ಯಾಪ್ಟನ್‌ ಪ್ರಶ್ನಿಸಿದ್ದಾರೆ. ಉಗ್ರರ ನಿರ್ಮೂಲನೆ ವಿಚಾರದಲ್ಲಿ ಕಪಟ ನಾಟಕವಾಡುವ ಪಾಕ್‌ ಜತೆಗೆ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎನ್ನುವ ರೀತಿಯಲ್ಲಿ ಅತ್ಯಂತ ನಿಷ್ಠುರವಾಗಿ ವ್ಯವಹರಿಸಬೇಕಾಗಿದೆ ಎಂದು ಹೇಳಿದರು. ಅಂತೆಯೇ ‘ಜೈಷ್ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾನದ ಭವಲ್ಪುರದಲ್ಲಿ ಅಡಗಿ ಕುಳಿತಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ನಿಮ್ಮಿಂದ ಇದು ಸಾಧ್ಯಗದಿದ್ದರೆ ಹೇಳಿ, ಭಾರತವೇ ಆತನನ್ನು ಸೆರೆ ಹಿಡಿದು ತಕ್ಕ ಶಾಸ್ತಿ ಮಾಡುತ್ತದೆ ಎಂದೂ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಗುಡುಗಿದ್ದಾರೆ.

About the author

ಕನ್ನಡ ಟುಡೆ

Leave a Comment