ಸಿನಿ ಸಮಾಚಾರ

ನಿಮ್ಮ ಮತದ ಮೂಲಕ ವಿರೋಧಿಗಳಿಗೆ ಉತ್ತರ ನೀಡಿ: ಸುಮಲತಾ ಪರ ಪ್ರಚಾರದಲ್ಲಿ ನಟ ದರ್ಶನ್ ಹೇಳಿಕೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ ನಡೆಸಿದರು.
ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನೀವು ಏಪ್ರಿಲ್ 18ರಂದು ನಡೆಯುವ ಚುನಾವಣೆ ಅವರ ಮಾತಿಗೆ ಉತ್ತರ ನೀಡಿ ಎಂದು ಹೇಳಿದ್ದಾರೆ. ಅಂಬರೀಷ್‌ಗೆ ಅಧಿಕಾರದ ದಾಹ ಇಲ್ಲ.ಕಾವೇರಿ ವಿಚಾರಕ್ಕೆ ಬಂದಾಗ 2008ರಲ್ಲಿ ಅಧಿಕಾರ ತ್ಯಾಗ ಮಾಡಿದರು. ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿ ಅಂಬರೀಷ್‌ಗೆ ಗೌರವ ಸಲ್ಲಿಸಿ’ ಎಂದು ದರ್ಶನ್ ಕರೆ ನೀಡಿದರು. ಕಹಳೆ ಹಿಡಿದು ಸುಮಲತಾಗೆ ಮತ ಹಾಕಿ ಎಂದು ದರ್ಶನ್ ಮನವಿ ಮಾಡಿದರು. ಕಹಳೆ ಊದುತ್ತಿರುವ ರೈತ ಸುಮಲತಾ ಅವರ ಚುನಾವಣೆ ಚಿಹ್ನೆಯಾಗಿದೆ. ಇಂದು  ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ , ಬೆಳಗೊಳ, ಪಾಲಹಳ್ಳಿ ಮುಂತಾದ ಗ್ರಾಮಗಳಲ್ಲಿ ದರ್ಶನ್ ಪ್ರಚಾರ ನಡೆಸಲಿದ್ದಾರೆ.

About the author

ಕನ್ನಡ ಟುಡೆ

Leave a Comment