ರಾಜ್ಯ ಸುದ್ದಿ

ನಿರಂತರ 4ನೇ ದಿನ ಏರಿಕೆ : ಮುಂಬಯಿ ಶೇರು 216 ಅಂಕ ಜಂಪ್‌

ಮುಂಬಯಿ : ನಿರಂತರ ನಾಲ್ಕನೇ ದಿನ ಏರುಗತಿಯನ್ನು ಮುಂದುವರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 36,000 ಅಂಕಗಳ ಮಟ್ಟವನ್ನು ಪುನರ್‌ ಸಂಪಾದಿಸಿತು. ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಂಡು ಬಂದ ಧನಾತ್ಮಕತೆ, ಬ್ಲೂ ಚಿಪ್‌ ಕಂಪೆನಿಗಳ ಮೂರನೇ ತ್ತೈಮಾಸಿಕ ಫ‌ಲಿತಾಂಶ ಆಶಾದಾಯಕವಾಗಿರುವ ವಿಶ್ವಾಸ, ದೇಶೀಯ ಹೂಡಿಕೆದಾರ ಸಂಸ್ಥೆಗಳಿಂದ ಮುಂಚೂಣಿ ಶೇರು ಖರೀದಿಯೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿಂದು ತೇಜಿ ಕಂಡು ಬಂತು.

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌ 216.29 ಅಂಕಗಳ ಏರಿಕೆಯೊಂದಿಗೆ 36,197.22 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 52.50 ಅಂಕಗಳ ಮುನ್ನಡೆಯೊಂದಿಗೆ 10,854.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾಲರ್‌ ಎದುರಿನ ಆರಂಭಿಕ ವಹಿವಾಟಿನಲ್ಲಿ ಇಂದು ರೂಪಾಯಿ 7 ಪೈಸೆಗಳ ಮುನ್ನಡೆಯನ್ನು ದಾಖಲಿಸಿ 70.14 ರೂ. ಮಟ್ಟಕ್ಕೆ ಏರುವಲ್ಲಿ ಸಫ‌ಲವಾಯಿತು.

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಕ್ಸಿಸ್‌ ಬ್ಯಾಂಕ್‌, ಇನ್‌ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಎಸ್‌ ಬ್ಯಾಂಕ್‌, ಟಾಟಾ ಸ್ಟೀಲ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ಟಾಪ್‌ ಗೇನರ್‌ಗಳು : ಇನ್‌ಫೋಸಿಸ್‌, ಎಕ್ಸಿಸ್‌ ಬ್ಯಾಂಕ್‌, ಯುಪಿಎಲ್‌, ಎಚ್‌ಯುಎಲ್‌, ಟೆಕ್‌ ಮಹೀಂದ್ರ; ಟಾಪ್‌ ಲೂಸರ್‌ಗಳು : ಎಚ್‌ ಪಿ ಸಿ ಎಲ್‌, ಟಾಟಾ ಸ್ಟೀಲ್‌, ಬಿಪಿಸಿಎಲ್‌, ಗೇಲ್‌, ಭಾರ್ತಿ ಇನ್‌ಫ್ರಾಟೆಲ್‌.

About the author

ಕನ್ನಡ ಟುಡೆ

Leave a Comment