ರಾಷ್ಟ್ರ

ನಿರ್ಮಲಾ ಸೀತರಾಮನ್ ವಿರುದ್ದ ವ್ಯಂಗ್ಯ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಹಿಳಾ ಆಯೋಗ ನೊಟೀಸ್

ನವದೆಹಲಿ: ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಲ್ ನೀಡಿದೆ.
ಮಹಿಳೆಯ ಹಿಂದೆ ನರೇಂದ್ರ ಮೋದಿ ಅಡಗಿ ಕುಳಿತಿದ್ದಾರೆ ಎಂದು ನಿರ್ಮಲಾ ಸೀತರಾಮನ್  ವಿರುದ್ಧ ಕಾಂಗ್ರೆಸ್ ಅಧ್ಯಕ್ಷರು ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಸ್ತ್ರೀದ್ವೇಷಿಯಾಗಿ, ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ. ರಫೇಲ್ ಹಗರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯನ್ನು ರಕ್ಷಿಸಿ, ಮಹಿಳೆ ಸಮರ್ಥನೆ ಮಾಡಿಕೊಂಡರು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು,
56 ಇಂಚಿನ ಎದೆಯ ಸೇವಕ ಓಡಿ ಹೋಗಿ, ಮಹಿಳೆಗೆ ನನ್ನನ್ನು ನಾನು ರಕ್ಷಿಸಿಕೊಳ್ಳುವುದಿಲ್ಲ,, ನೀವು ನನ್ನನ್ನು ರಕ್ಷಿಸಿ ಎಂದು ಕೇಳಿಕೊಂಡರು, ಇದಕ್ಕಾಗಿ ಮಹಿಳೆ ಎರಡೂವರೆ ಗಂಟೆಗಳ ಕಾಲ ಅವರನ್ನು ಸಮರ್ಥಿಸಿ ರಕ್ಷಣೆ ಮಾಡಿಕೊಂಡರು. ನಾನು ನಿಮ್ಮನ್ನು ನೇರವಾಗಿ ಪ್ರಶ್ನಿಸುತ್ತೇನೆ, ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿ, ಆದರೆ ಈ ಮಹಿಳೆ ಉತ್ತರಿಸುವುದು ಬೇಡ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

About the author

ಕನ್ನಡ ಟುಡೆ

Leave a Comment