ರಾಜಕೀಯ

ನೀತಿ ಸಂಹಿತೆ ಉಲ್ಲಂಘನೆ: ಹೊಲಿಗೆ ಯಂತ್ರ ವಶ

ಮಹದೇವಪುರ: ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮಂಗಳವಾರ ಅಕ್ರಮವಾಗಿ ಸಂಗ್ರಹಿಸಿದ್ದ ಹೊಲಿಗೆ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು ಬಳಿ ಮನೆಯೊಂದರಲ್ಲಿ ಜನರಿಗೆ ಹಂಚಲೆಂದು ಸಂಗ್ರಹಿಸಿಡಲಾಗಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ 50 ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಇವು ಕಾಂಗ್ರೆಸ್ಗೆ ಸೇರಿದ ಹೊಲಿಗೆ ಯಂತ್ರಗಳು ಎನ್ನಲಾಗುತ್ತಿದೆ. ಚುನಾವಣೆ ಅಧಿಕಾರಿಗಳ ತಂಡ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

About the author

ಕನ್ನಡ ಟುಡೆ

Leave a Comment