ಅಂಕಣಗಳು

ನೀರಿನ ಅಗತ್ಯತೆ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ

ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಮಾರ್ಚ್ 22ರಂದು ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಜಲ ದಿನವನ್ನು ಮೊದಲ ಬಾರಿಗೆ 1993ರ ಮಾರ್ಚ್ 22ರಂದು ಆರಂಭಿಸಲಾಯಿತು.

ದಿನಾಚರಣೆಯ ಈ ವರ್ಷದ ಘೋಷವಾಕ್ಯ ನೀರಿಗಾಗಿ 21 ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನ್ವೇಷಣೆ ಮಾಡುವುದು ಎಂಬುದಾಗಿದೆ. ಜೀವವೈವಿಧ್ಯ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದರೆ ಮಾನವನ ಬಳಕೆಗೆ ಉಪಯೋಗವಾಗುವ ನೀರಿನ ಗುಣಮಟ್ಟ ಮತ್ತು ಪ್ರಮಾಣಕ್ಕೆ ಹಾನಿಯುಂಟಾಗುತ್ತದೆ. ಇಂದು ವಿಶ್ವದಲ್ಲಿ 2.1 ಶತಕೋಟಿ ಜನರಿಗೆ ಕುಡಿಯಲು ಸುರಕ್ಷಿತ ನೀರು ಸಿಗುತ್ತಿಲ್ಲ. ಇದರಿಂದ ಆರೋಗ್ಯ ಜೀವನ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ.

ನೀರು ಜೀವಸಂಕುಲ ಬೆಳವಣಿಗೆಯಲ್ಲಿ ಅತಿ ಅಗತ್ಯ. ಮನುಷ್ಯನ ಬಾಯಾರಿಕೆ ಮತ್ತು ಆರೋಗ್ಯವನ್ನು ರಕ್ಷಿಸುವುದಲ್ಲದೆ ಅದಕ್ಕಿಂತಲೂ ಹೆಚ್ಚಿನ ಮಹತ್ವ ನೀರಿಗಿದೆ. ನಾವು ಪ್ರವಾಹ ಬರಗಾಲ ಮತ್ತು ನೀರಿನ ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಬೇಕು ಎಂಬುವುದರ ಬಗ್ಗೆ ನಾವು ಹಾಳವಾಗಿ ಚಿಂತನೆಯನ್ನು ಮಾಡಬೇಕಿದೆ.

 

About the author

ಕನ್ನಡ ಟುಡೆ

Leave a Comment