ಕವಿತೆಗಳು

ನೀ ಬರದೇ ಏಕೆ ಹೋದೆ…?

ಪದೇ ಪದೇ ನಿನ್ನ ಕರೆದೆ
ನೀ ಬರದೇ ಏಕೆ ಹೋದೆ …!
ಕಣ್ಣು ಕಣ್ಣುಲ್ಲಿ ನೀನೇ ತುಂಬಿದೆ
ನಿನ್ನ ಕಾಣದೆ ನಾ ನೊಂದೆ …!

ಮನದಲಿ… ನೀನು,ಕನಸಲಿ ….ನೀನು
ನೀನೆ ….ನೀನೇ ..ನನ್ನ ಜೀವ
ಬಳಿ ಬಾರೋ …ಬಾರೋ …ಭಾವ !!
ಕೇಳೋ ..ಕೆಳೋ.. ನನ್ನ ನೋವ !!

ಬಚ್ಚಿಟ್ಟೆ ಪ್ರೀತಿಯನು ನಾನು
ಬಂದು ಆಲಿಸು ನೀನು !
ಹಾಡಿದೆ ಮಧುರ ರಾಗ
ಕೂಡಿದೆ ಸುಯೋಗ !

ಎಲ್ಲಿ..ಎಲ್ಲಿ.. ಹುಡುಕಲಿ ನಿನ್ನ
ಬಂದು ಸೇರೋ …ನನ್ನ ..
ಮಧುವು ತುಂಬಿ ತುಳುಕಿದೆ
ದುಂಬಿಗಾಗಿ ..ಕಾದಿದೆ !

ಓ ಚಿನ್ನ ಬಂದು ಸೇರು ನನ್ನ
ಸಹಿಸಲಾಗದು ಬೇಗೆ ಇನ್ನ

ಸುರಭಿ ಲತಾ

About the author

ಕನ್ನಡ ಟುಡೆ

Leave a Comment