ರಾಷ್ಟ್ರ

ನೆಲಬಾಂಬ್ ಸ್ಫೋಟದಿಂದ ಯೋಧ ಹುತಾತ್ಮ

ಛತ್ತೀಸ್‌ಗಢ: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರಿನ ಎಚ್.ಎಸ್.ಚಂದ್ರ ಅವರು ಛತ್ತೀಸ್‌ಗಢದ ಅರಣ್ಯಪ್ರದೇಶದಲ್ಲಿ ನಕ್ಸಲ ವಿರುದ್ಧದ ಕಾರ್ಯಾಚರಣೆಗೆ ತೆರಳುತ್ತಿದ್ದ ವೇಳೆ ಮಂಗಳವಾರ ನೆಲಬಾಂಬ್‌ ಸ್ಫೋಟದಿಂದ ಹುತಾತ್ಮರಾಗಿದ್ದಾರೆ.

ಸಹೋದರರ ಮನೆಯ ಗೃಹಪ್ರವೇಶ ಪತ್ನಿಯ ಸೀಮಂತ ಮುಗಿಸಿ ಕರ್ತವ್ಯದ ಕರೆಗೆ ಹೊರಡುವ ಸಂದರ್ಭದಲ್ಲಿ ಪತ್ನಿಗೆ  ಭಯ ಪಡಬೇಡ ಹೆರಿಗೆಯಾಗುತ್ತಲೇ ಬರುತ್ತೆನೆ ಎಂದು ಹೇಳಿ ದಿನಗಳು ಕಳೆವಷ್ಟರಲ್ಲೆ ಆತನ ಸಾವಿನ ಸುದ್ದಿ ಸಿಡಿಲಿನಂತೆ ಅಪ್ಪಳಿಸಿದೆ. ಪತ್ನಿ ಸೇರಿದಂತೆ ಇಡಿ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.

ಚಂದ್ರು ಅವರು 2016ರ ನ.26, 27 ರಂದು ಪೃಥ್ವಿ ಅವರನ್ನು ಬಾಳಸಂಗಾತಿಯಾಗಿ ಮಾಡಿಕೊಂಡು ಸಪ್ತಪದಿ ತುಳಿದಿದ್ದರು. ಛತ್ತೀಸ್‌ಗಢದಲ್ಲಿಯೇ ಪತ್ನಿಯೊಂದಿಗೆ ನೆಲೆಸಿದ್ದ ಚಂದ್ರ ಫೆ.17 ರಂದು ಊರಿಗೆ ಬಂದಿದ್ದರು. ಫೆ.18ಕ್ಕೆ ಸೀಮಂತ ಮಾಡಿ ಪತ್ನಿಯನ್ನು ತವರು  ಮನೆಗೆ ಕಳುಹಿಸಿದ್ದರು.ಮಾ.8ರಂದು ಸಹೋದರರಾದ ತಮ್ಮಣ್ಣ ಯೋಗೇಶ್‌ ಅವರ ಮನೆ ಗೃಹಪ್ರವೇಶ ಮುಗಿಸಿ ಕರ್ತವ್ಯದ ಕರೆ ಹಿನ್ನೆಲೆಯಲ್ಲಿ ಮಾ.11 ರಂದು ಛತ್ತೀಸ್‌ಗಢಕ್ಕೆ ತೆರಳಿದ್ದರು.

ಮಂಗಳವಾರ ಬೆಳಗ್ಗೆ ಕರ್ತವ್ಯಕ್ಕೆ ತೆರಳಿದ್ದರು ಅಷ್ಟರಲ್ಲಿ ನಕ್ಸಲರು ಅಟ್ಟಹಾಸ ಮೆರೆದು ಚಂದ್ರ ಸೇರಿದಂತೆ “ಒಂಬತ್ತು ಯೋಧರ”ನ್ನು ಬಲಿಪಡೆದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದಾರೆ. ವಂಶದ ಕುಡಿಯನ್ನು ಮುದ್ದಾಡುವ ಸಂಭ್ರಮಕ್ಕೆ ಮುನ್ನವೇ ಯೋಧ  ಚಂದ್ರರವರು ಬಾರದ ಲೋಕಕ್ಕೆ ಪಯಣಿಸಿದರು.

 

About the author

ಕನ್ನಡ ಟುಡೆ

Leave a Comment