ಆಹಾರ

ನೆಲ್ಲಿಕಾಯಿಯ ಉಪ್ಪಿನಕಾಯಿ ರೆಸಿಪಿ.

ಊಟವೆಂದ ಮೇಲೆ ಉಪ್ಪಿನಕಾಯಿ ಇದ್ದರನೇ ಚೆನ್ನ. ಇಲ್ಲಿ ನಾವು ನೆಲ್ಲಿಕಾಯಿ ಉಪ್ಪಿನಕಾಯಿಯ ಸರಳ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
200 ಗ್ರಾಂ ನೆಲ್ಲಿಕಾಯಿ
ಒಂದೂವರೆ ಚಮಚ ಜೀರಿಗೆ
ಒಂದೂವರೆ ಚಮಚ ಸೋಂಪು
3 ಚಮಚ ಉಪ್ಪು ಅರ್ಧ ಚಮಚ ಅರಿಶಿಣ ಪುಡಿ
1/4 ಕಪ್‌ ಸಾಸಿವೆ ಎಣ್ಣೆ
1 ಚಮಚ ಸಾಸಿವೆ
1/2 ಚಮಚ ಈರುಳ್ಳಿ ಬೀಜ (Onion Seeds)
2 ಚಮಚ ಖಾರದ ಪುಡಿ

3 ಕಪ್‌ ನೀರು (ಚೆನ್ನಾಗಿ ಕುದಿಸಿ ಆರಿಸಿದ ನೀರು)

ನೆಲ್ಲಿಕಾಯಿಯ ಉಪ್ಪಿನಕಾಯಿ ಮಾಡುವ ವಿಧಾನ:  ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಶುಭ್ರ ಕಾಟನ್‌ ಬಟ್ಟೆಯಲ್ಲಿ ಒರೆಸಿ. ನಂತರ ಅವುಗಳನ್ನು ನೀರಿನಲ್ಲಿ ಹಾಕಿ 2 ಚಮಚ ಉಪ್ಪು ಹಾಕಿ ಒಂದು ಗಂಟೆ ಇಡಿ. ಈಗ ಪ್ಯಾನ್‌ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ನಂತರ ಉರಿಯನ್ನು ಆಫ್‌ ಮಾಡಿ ಜೀರಿಗೆ, ಸೋಂಪು, ಈರುಳ್ಳಿ ಬೀಜ ಹಾಕಿ. ಈಗ ಅರಿಶಿಣ ಪುಡಿ ಹಾಕಿ, ನಂತರ ನೆಲ್ಲಿಕಾಯಿ ಹಾಕಿ ಮತ್ತೊಮ್ಮೆ ಪ್ಯಾನ್‌ ಅನ್ನು 5 ನಿಮಿಷ ಬಿಸಿ ಮಾಡಿ, 2 ಚಮಚ ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಉರಿಯಿಂದ ಇಳಿಸಿ, ಉಪ್ಪಿನಕಾಯಿ ಡಬ್ಬಿಗೆ ಹಾಕಿ ಅದರ ಬಾಯಿಯನ್ನು ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ 4-5 ದಿನ ಇಟ್ಟರೆ ಉಪ್ಪಿನಕಾಯಿ ರೆಡಿ.

About the author

ಕನ್ನಡ ಟುಡೆ

Leave a Comment