ರಾಜಕೀಯ

ನೋಟುಗಳ ಜೊತೆ ಮೋದಿ ಅಲೆಯೂ ಕೊಚ್ಚಿ ಹೋಗಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಮೈಸೂರು:  ನರೇಂದ್ರ ಮೋದಿ ಒಬ್ಬರೇ ಪ್ರಧಾನಿ ಆಗವುದಕ್ಕೆ ಅರ್ಹ ವ್ಯಕ್ತಿಯಲ್ಲ, ಮಾಜಿ ಪ್ರಧಾನಿ ದೇವೇಗೌಡರು ಕೂಡ ಇದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನೋಟುಗಳ ಜೊತೆ ಮೋದಿ ಅಲೆಯೂ ಕೊಚ್ಚಿ ಹೋಗಿದೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೆ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೌಲ್ಯಮಾಪನ ಪ್ರಾರಂಭವಾಗಿದೆ, ಮೋದಿಯವರ ಭರವಸೆಗಳು ಹುಸಿಯಾಗಿವೆ, ಜನರನ್ನು ನಂಬಿಸಿ  ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶೇ.10 ರಷ್ಟು ಮೀಸಲಾತಿ ಆಶ್ವಾಸನೆ ಕೊಡಲು ಪ್ರಾರಂಭ ಮಾಡಿದ್ದಾರೆ. ಜನರನ್ನು ನಂಬಿಸಲು ಇದು ಸುಳ್ಳಿನ ಕಂತೆಯಾಗಿದೆ, ನೋಟಿನ ಜೊತೆ ಮೋದಿ ಅಲೆಯೂ ಕೊಚ್ಚಿ ಹೋಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ದುಡ್ಡು ಹಾಕುವುದಾಗಿ ಮೋದಿ ಹೇಳಿದ್ದರು, ಆದರೆ ಈಗ ಚುನಾವಣೆ ಇರುವುದರಿಂದ ರೈತರ ಅಕೌಂಟ್ ಗೆ ಹಾಕುವುದಾಗಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

About the author

ಕನ್ನಡ ಟುಡೆ

Leave a Comment