ರಾಜ್ಯ ಸುದ್ದಿ

ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ: ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಪಾರಂಪರಿಕ ನಗರಿ

ಬಳ್ಳಾರಿ: 2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ. “ದಿ ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ಬಿಡುಗಡೆ ಮಾಡಿರುವ 2019ರಲ್ಲಿ ನೋಡಬೇಕಾದ  ಟಾಪ್ 52  ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ ಸಿಕ್ಕಿದೆ. ಇನ್ನು ಹಂಪಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರವಾಸಿ ಸ್ಥಳ ಎನ್ನುವುದು ಗಮನಾರ್ಹ ಅಂಶ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರದ ವೈಭವಕ್ಕೆ ಸಾಕ್ಷಿಯಾಗಿದ್ದ ಈ ನಗರಿ ಹಲವಾರು ದೇವಾಲ, ವಿಶಾಲವಾದ ಮಾರುಕಟ್ಟೆ ಬೀದಿಗಳನ್ನು ಹೊಂದಿದೆ. ಇಲ್ಲಿ ನೂರ್ತಕ್ಕೂ ಅಧಿಕ ಮಂಟಪಗಳು, ದೇವಾಲಯಗಳಿದ್ದು ಇತಿಹಾಸ ಪ್ರೇಮಿಗಳು, ಪ್ರವಾಸಿಗರ ಮನಸೂರೆಗೊಳ್ಳೂತ್ತದೆ.

About the author

ಕನ್ನಡ ಟುಡೆ

Leave a Comment