ರಾಜ್ಯ ಸುದ್ದಿ

ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಬೆಂಗಳೂರು: ನ್ಯಾಯಕ್ಕಾಗಿ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ್ದ ಸಹಾಯಕ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ನನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಹಿಳೆಯೊಬ್ಬರು ಕುಮಾರಸ್ವಾಮಿ ಲೇಔಟ್​ನಲ್ಲಿರುವ ಪೊಲೀಸ್​ ಠಾಣೆಗೆ ಬಂದಿದ್ದರು. ಆದರೆ, ಮಹಿಳೆಯ ಅಹವಾಲು ಸ್ವೀಕರಿಸದೇ ಎಸ್​ಐ‌ ರೇಣುಕಯ್ಯ ಮಹಿಳೆಯ ಮೇಲೆ ಕೈ ಮಾಡಿ, ಕುತ್ತಿಗೆ ಹಿಡಿದು ದರ್ಪ ಮೆರೆದಿದ್ದರು. ದಕ್ಷ ಅಧಿಕಾರಿ ಅಣ್ಣಾಮಲೈ ಸುಪರ್ದಿಯಲ್ಲಿರುವ ಠಾಣೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಈ ಬಗ್ಗೆ ದಿಗ್ವಿಜಯ ನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೆ ಎಚ್ಚೆತ್ತ ದಕ್ಷಿಣ ವಿಭಾಗ ಡಿಸಿಪಿ ಕೆ.ಅಣ್ಣಾಮಲೈ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಎಸ್​ಐ ರೇಣುಕಯ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment