ರಾಜ್ಯ ಸುದ್ದಿ

ನ್ಯಾಯಮೂರ್ತಿ ಎ ಎಸ್ ಬೋಪಣ್ಣಗೆ ಹೈಕೋರ್ಟ್ ನಿಂದ ಶುಭ ವಿದಾಯ

ಬೆಂಗಳೂರು: ಗುವಾಹಟಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಾಧೀಶ ಎ ಎಸ್ ಬೋಪಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ವಿದಾಯ ಹೇಳಿದೆ. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನ ಅಧ್ಯಕ್ಷ ಹಿರಿಯ ವಕೀಲ ವೈ ಆರ್ ಸದಾಶಿವ ರೆಡ್ಡಿ ವಿದಾಯ ಭಾಷಣ ಮಾಡಿ, ನ್ಯಾಯಮೂರ್ತಿ ಬೋಪಣ್ಣ ಅವರು ರಾಜ್ಯ ಹೈಕೋರ್ಟ್ ನ 12 ವರ್ಷದ ಸೇವೆಯಲ್ಲಿ ಉನ್ನತ ಮಟ್ಟದ ಸಹಾನುಭೂತಿ ಪ್ರದರ್ಶಿಸಿದ್ದಾರೆ, ವೃತ್ತಿಯಲ್ಲಿ ಅವರು ಪಾರದರ್ಶಕತೆ ಹೊಂದಿದ್ದರು, ಬೆಂಗಳೂರು ಮಧ್ಯವರ್ತಿ ಕೇಂದ್ರಕ್ಕೆ ಅವರ ಕೊಡುಗೆ ಅಸಾಧಾರಣ ಎಂದು ಶ್ಲಾಘಿಸಿದರು.ನ್ಯಾಯಮೂರ್ತಿ ಬೋಪಣ್ಣ ಅವರ ಬಡ್ತಿ ಹಾಗೂ ವರ್ಗಾವಣೆ ನಂತರ ಹೈಕೋರ್ಟ್ ನಲ್ಲಿ ನ್ಯಾಯಾಧೀಶರುಗಳ ಸಂಖ್ಯೆ 28ಕ್ಕೆ ಇಳಿದಿದೆ.

About the author

ಕನ್ನಡ ಟುಡೆ

Leave a Comment