ರಾಷ್ಟ್ರ

ನ್ಯಾಯಾಂಗದಲ್ಲೂ ಆರ್ ಎಸ್ ಎಸ್ ನವರನ್ನು ನೇಮಿಸಲು ಸರ್ಕಾರ ಹುನ್ನಾರ-ಕಾಂಗ್ರೆಸ್ ಆರೋಪ

ನವದೆಹಲಿ : ನ್ಯಾಯಿಕ ಸಂಸ್ಥೆಗಳಲ್ಲಿಯೂ ಆರ್ ಎಸ್ ಎಸ್ ಹಿನ್ನೆಲೆಯವರನ್ನು ನೇಮಿಸಲು ಕೇಂದ್ರಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ಪ್ರಚಾರಕರನ್ನು ನೇಮಿಸಿರುವ ಬಿಜೆಪಿ ಇದೀಗ  ನ್ಯಾಯಿಕ ಸಂಸ್ಥೆಗಳಲ್ಲಿಯೂ ಆರ್ ಎಸ್ ಎಸ್ ಪ್ರಚಾರಕರನ್ನು ನೇಮಕ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಕೀಲ ಕಪಿಲ್ ಸಿಬಲ್ ಟೀಕಿಸಿದ್ದಾರೆ.ಇದನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಿಲ್ಲ, ಅಗತ್ಯಬಿದ್ದರೆ  ಈ ವಿವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅವರು ಹೇಳಿದ್ದಾರೆ.ದೇಶದಲ್ಲಿನ ಎಲ್ಲಾ ಸಂಸ್ಥೆಗಳು ಕೇಂದ್ರಸರ್ಕಾರದ ನಿಯಂತ್ರಣಕ್ಕೊಳಗಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ.  ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ನ್ಯಾಯಾಂಗ ವ್ಯವಸ್ಥೆಯಲ್ಲೂ ಕೇಂದ್ರಸರ್ಕಾರದ ನೇರ ಹಸ್ತಕ್ಷೇಪ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಾಧೀಶ  ಚೆಲ್ಲಮೇಶ್ವರ್  ಪ್ರತ್ರ ಬರೆದಿದ್ದಾರೆ.ಕರ್ನಾಟಕದ ಮುಖ್ಯ ನ್ಯಾಯಾಧೀಶರ ನೇಮಕ ಸಂಬಂಧ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕೇಂದ್ರಸರ್ಕಾರ ಪತ್ರ ಬರೆದಿರುವುದು ಇದೇ ಮೊದಲು ಎಂದರು.ನ್ಯಾಯಾಲಯದಲ್ಲಿನ ಆಯ್ದ ಹುದ್ದೆಗಳಿಗೆ   ಆರ್ ಎಸ್ ಎಸ್ ಹಿನ್ನೆಲೆಯ ಹಾಗೂ ವಿಶ್ರಾಂತಿಯಲ್ಲಿರುವಂತಹವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment