ರಾಷ್ಟ್ರ

ನ್ಯಾಷನಲ್ ಕ್ರೆಡಿಟ್ ಕಾಪ್೯ (ಎನ್ಸಿಸಿ) ಮಹಾನಿರ್ದೇಶಕರಾಗಿ ಲೆಫ್ಟಿನೆಂಡ್ ಜನರಲ್ ಪಿ.ಪಿ. ಮಲ್ಹೋತ್ರ ಅಧಿಕಾರ ಸ್ವೀಕರಾ

ನ್ಯಾಷನಲ್ ಕ್ರೆಡಿಟ್ ಕಾಪ್೯  (ಎನ್‌ಸಿಸಿ) ಮಹಾನಿರ್ದೇಶಕರಾಗಿ ಲೆಫ್ಟಿನೆಂಡ್ ಜನರಲ್ ಪಿ.ಪಿ. ಮಲ್ಹೋತ್ರ ಅಧಿಕಾರ ಸ್ವೀಕರಿಸಿದ್ದಾರೆ.ಎನ್‌ಸಿಸಿ ವಿಶ್ವದ ಅತಿದೊಡ್ಡ ಸಂಘಟಿತ ಯುವ ಸಂಘಟನೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ರಾಷ್ಟ್ರ ಪ್ರೇಮ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.ಈ ಹುದ್ದೆ ಸ್ವೀಕರಿಸುವ ಮುನ್ನ ಇವರು ಸೇನೆಯ ನಾದರ್ನ್ ಕಮಾಂಡ್ ನ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ವಿವಿಧ ರೆಜಿಮೆಂಟ್‌ಗಳು, ಸಿಬ್ಬಂದಿ ನೇಮಕಾತಿ ಸಂಸ್ಥೆಗಳು ಸೇರಿದಂತೆ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಯ ಹಳೇ ವಿದ್ಯಾರ್ಥಿಯಾಗಿರುವ ಇವರು, 1983ರ ಜೂನ್ 18ರಂದು ಭಾರತೀಯ ಭೂಸೇನೆಯ ಇಂಜಿನಿಯರ್ ಕಾರ್ಪ್ಸ್ ಗೆಸೇರ್ಪಡೆಗೊಂಡರು.

About the author

ಕನ್ನಡ ಟುಡೆ

Leave a Comment