ರಾಜಕೀಯ

ಪಂಚರಾಜ್ಯಗಳ ಚುನಾವಣೆ ಎಫೆಕ್ಟ್: ಹೆಚ್ಚಿದ ಸಮ್ಮಿಶ್ರ ಸರ್ಕಾರದ ಪ್ರಾಬಲ್ಯ

ಬೆಂಗಳೂರು: ಛತ್ತೀಸ್ ಗಡ, ರಾಜಸ್ತಾನ, ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು 2019ರ ಲೋಕಸಭೆ ಚುನಾವಣೆಯ ಟ್ರೇಲರ್ ಇದಾಗಿದೆ, ಈ ಚುನಾವಣೆ ಫಲಿತಾಂಶ ಕರ್ನಾಟಕ ಸಮ್ಮಿಶ್ರ ಸರ್ಕಾರದ ಸ್ಥಿರತೆ ಹೆಚ್ಚಿಸಲು ಸಾಧ್ಯವಾಗಿದೆ.
ಈ ಫಲಿತಾಂಶಗಳು ಕರ್ನಾಟಕ ಸಮ್ಮಿಶ್ರ ಸರ್ಕಾರದ ಲೆಕ್ಕಾಚಾರಗಳನ್ನು ಬದಲಾಯಿಸಿದೆ. ಜೆಡಿಎಸ್ ಪಾಲುದಾರಿಕೆ ಕಾಂಗ್ರೆಸ್ ಕೈಯನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಪಂಚರಾಜ್ಯಗಳ ಬಿಜೆಪಿ ಚುನಾವಣಾ ಸೋಲು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಮತ್ತಷ್ಟು ಬಲ ತಂದಿದೆ. ಜೊತೆಗೆ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಬಂಧನ ಮತ್ತಷ್ಟು ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಛತ್ತೀಸ್ ಗಡ ಮತ್ತು , ರಾಜಸ್ತಾನ ಹಾಗೂ ಮಧ್ಯಪ್ರದೇಶ ಚುನಾವಣೆ ಫಲಿತಾಂಶಪ್ರಧಾನಿ ಮೋದಿ ಅವರಿಗೆ ಪಾಠ ಕಲಿಸಿದ್ದು, 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಸಂಪುಟದಲ್ಲಿ ಸ್ಥಾನ ಸಿಗದೇ ಅತೃಪ್ತಗೊಂಡಿರುವ ಶಾಸಕರಿಗೆ ಕಾಂಗ್ರೆಸ್ ವಿಜಯದಿಂದಾಗಿ ಸ್ವಲ್ಪ ಮಟ್ಟಿಗೆ ಆತ್ಮನ ವಿಶ್ವಾಸ ಬಂದಿದೆ, ಚಳಿಗಾಲದ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಆಗಲಿದೆ.

About the author

ಕನ್ನಡ ಟುಡೆ

Leave a Comment