ರಾಷ್ಟ್ರ ಸುದ್ದಿ

ಪಂಚರಾಜ್ಯಗಳ ಫಲಿತಾಂಶ ಮೋದಿ ಸರ್ಕಾರದ ಕುರಿತಂತೆ ಮೌಲ್ಯಮಾಪನವಲ್ಲ: ರಾಜನಾಥ್ ಸಿಂಗ್

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಫಲಿತಾಂಶ ಆಯಾ ರಾಜ್ಯಗಳಲ್ಲಿನ ಆಡಳಿತಕ್ಕೆ ಜನ ನೀಡಿರುವ ಪ್ರತಿಕ್ರಿಯೆ ಮಾತ್ರವೇ ಆಗಿದ್ದು ಇದು ಕೇಂದ್ರದ ಮೋದಿ ಸರ್ಕಾರದ ವಿರುದ್ಧವಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಫಲಿತಾಂಶಗಳು ಇಂದು ಹೊರಬಿದ್ದಿದ್ದು ಎರಡು ರಾಜ್ಯಗಳಲ್ಲಿ ಕಾಂಗ್ರೆಸ್,ಇಎರ್ಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಜಯ ಸಾಧಿಸಿದೆ. ಇದರೊಡನೆ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಜನ ಆಯಾ ರಾಜ್ಯಗಳ ಆಡಳಿತ ವೈಖರಿಯನ್ನು ನೋಡಿ ಮತ ಚಲಾಯಿಸಿದ್ದಾರೆ.ಈ ಫಲಿತಾಂಶ ಕೇಂದ್ರ ಸರ್ಕಾರದ ಮೌಲ್ಯಮಾಪನವಲ್ಲ.” ಎಂದು ಸಿಂಗ್ ಹೇಳಿದ್ದಾರೆ.
ಅಲ್ಲದೆ ತೆಲಂಗಾಣದೌದಾಹರಣೆ ಣೀಡಿದ ಸಿಂಗ್ “ಬಿಜೆಪಿ ವಿರುದ್ಧ ಮಹಾಘಟಬಂಧನ್ ರಚಿಸಿಕೊಂಡು ಹೋರಾಟಕ್ಕಿಳಿದ ಕಾಂಗ್ರೆಸ್ ತೆಲಂಗಾಣದಲ್ಲಿ ಮಹಾಕುಸಿತ ಕಂಡಿದೆ. ಅಲ್ಲಿ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ.” ಎಂದರು.ಸಂಸತ್ತಿನ ಹೊರಗೆ ಸುದ್ದಿಗಾರರೊಡನೆ ಅವರು ಮಾತನಾಡುತ್ತಿದ್ದರು.

About the author

ಕನ್ನಡ ಟುಡೆ

Leave a Comment