ರಾಜಕೀಯ

ಪಕ್ಷೇತರ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಹೊಸ ಪ್ಲಾನ್: ಸುಮಲತಾ ಗೆ ದಳಪತಿಗಳ ಶಾಕ್

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಟಿ ಸುಮಲತಾ  ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ, ಮಂಡ್ಯ ಲೋಕಸಭಾ ಕಣದಲ್ಲಿ ತೀವ್ರ ಸವಾಲೊಡ್ಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರನ್ನು ಕಟ್ಟಿಹಾಕುವ ಯತ್ನವಾಗಿ ಅವರದೇ ಹೆಸರಿನ ಇನ್ನೂ ಮೂವರು ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್‌ ಮುಂದಾಗಿದೆ.  ಕನಕಪುರ ಮೂಲದ ಪಿ. ಸುಮಲತಾ, ಕೆ.ಆರ್.ಪೇಟೆ ತಾಲ್ಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬವರು  ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿಸುವ ಯತ್ನವಾಗಿ ಸುಮಲತಾ ಎಂಬ ಹೆಸರಿನ ಇನ್ನೂ ಮೂರು ಮಂದಿಯನ್ನು ಕಣಕ್ಕಿಳಿಸುವ ತಂತ್ರ ಹೂಡಲಾಗಿದೆ ಎಂದು ಹೇಳಲಾಗಿದೆ,
ಈ ಮೂಲಕ ಮಂಡ್ಯದಲ್ಲಿ ‘ದಳಪತಿ’ಗಳು ಸುಮಲತಾಗೆ ದೊಡ್ಡ ಆಘಾತ ನೀಡಲು ಮುಂದಾಗಿದ್ದಾರೆ. ಸಮರ್ಥ ವೈರಿಗಳನ್ನು ಹಣಿಯಲು ಬಳಸುವ ತಂತ್ರ ಇದಾಗಿದೆ. ಸುಮಲತಾ ಮಂಜೇಗೌಡ, 2. ಸುಮಲತಾ, 3. ಸುಮಲತಾ ದರ್ಶನ್ ಪಿ. ಸುಮಲತಾ ಅಂಬರೀಷ್ ಅವರಿಗೆ ಅನುಕಂಪದ ಅಲೆಯ ಜತೆಗೆ ಚಿತ್ರರಂಗದ ಬೆಂಬಲ, ಜಿಲ್ಲಾ ಕಾಂಗ್ರೆಸ್‌ ನ ಬಹುತೇಕ ಪದಾಧಿಕಾರಿಗಳು, ಕಾರ್ಯಕರ್ತರ ಬೆಂಬಲ ದೊರೆತಿದೆ. ಅಲ್ಲದೆ ಬಿಜೆಪಿ ಕೂಡ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅಂಬರೀಷ್ ಅವರಿಗೆ ಅಧಿಕೃತ ಬೆಂಬಲ ಘೋಷಿಸಿದೆ. ಅವರ ಪರವಾಗಿ ತಾವು ಹಾಗೂ ಬಿಜೆಪಿಯ ಇತರ ನಾಯಕರೂ ಪ್ರಚಾರ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಸುಮಲತಾ ಅಂಬರೀಷ್  ಮೂರು ಸೆಟ್ ನಾಮಪತ್ರ ಸಲ್ಲಿಸಬೇಕಿತ್ತು,ಕೆವಲ ಒಂದೇ ಒಂದು ಸೆಟ್ ಮಾತ್ರ ಸಲ್ಲಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅಬಿಮಾನಿಗಳ ಸಂಘದ ಅಧ್ಯಕ್ಷ ಹಾಗೂ  ಸುಮಲತಾ ಅಂಬರೀಷ್ ಅವರ ಸಂಬಂಧಿ ಮದನ್  ಇನ್ನು ಉಳಿದ ಎರಡು ಸೆಟ್ ಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ, ಈ ವೇಳೆ ಸುಮಲತಾ ಅವರು ಶ್ರೀರಂಗ ಪಟ್ಟಣದಲ್ಲಿ ಪ್ರಚಾರದಲ್ಲಿ ತೊಡಗಿದ್ದರು.

About the author

ಕನ್ನಡ ಟುಡೆ

Leave a Comment