ರಾಷ್ಟ್ರ ಸುದ್ದಿ

ಪಕ್ಷ ಬಯಸಿದರೆ ಸ್ಪರ್ಧೆಗೆ ಸಿದ್ಧ ಎಂದ ಪ್ರಿಯಾಂಕಾ

ಲಖನೌ: ಪಕ್ಷ ಸಂಘಟನೆಯೇ ಸದ್ಯ ನನ್ನ ಗುರಿ. ಆದಾಗ್ಯೂ ಪಕ್ಷ ಬಯಸಿದಲ್ಲಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಸಿದ್ಧ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಬುಧವಾರ ಎರಡನೇ ಸುತ್ತಿನ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಸಹೋದರ ರಾಹುಲ್‌ ಗಾಂಧಿ ಅವರ ಲೋಕಸಭೆ ಕ್ಷೇತ್ರ ಅಮೇಠಿಯಲ್ಲಿ ‘ಹಮಾರಾ ಬೂತ್‌, ಹಮಾರಾ ಗೌರವ್‌’ ಕಾರ‍್ಯಕ್ರಮದಲ್ಲಿ ಪಕ್ಷದ ಕಾರ‍್ಯಕರ್ತರೊಂದಿಗೆ ಸಂವಾದ ನಡೆಸಿದರು. ಹಲವು ಪ್ರಚಾರ ಸಭೆಗಳನ್ನೂ ನಡೆಸಿ, ಕೇಂದ್ರದಲ್ಲಿರುವುದು ಹುಸಿ ಭರವಸೆಗಳ ಜೂಮ್ಲಾಬಾಜಿ ಸರಕಾರ ಎಂದು ಟೀಕಿಸಿದರು. ಗುರುವಾರ ರಾಯ್‌ ಬರೇಲಿ ಹಾಗೂ ಫೈಜಾಬಾದ್‌ನಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.

ಅಮೇಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ”ಪಕ್ಷ ಬಲವರ್ಧನೆ ಸದ್ಯದ ನನ್ನ ಕಾಯಕ. ಒಂದೊಮ್ಮೆ ಪಕ್ಷ ಬಯಸಿದರೆ ಚುನಾವಣೆಗೆ ನಿಲ್ಲಲು ನಾನು ರೆಡಿ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ,” ಎಂದು ಹೇಳಿದರು. ಈ ಮೊದಲು ತಾಯಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿಯಿಂದ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಕಣಕ್ಕಿಳಿದಿರುವ ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಮಾರ್ಚ್‌ 21ರಂದು ಪ್ರಿಯಾಂಕಾ ಅವರು ಪ್ರಯಾಗ್‌ರಾಜ್‌ನಿಂದ ವಾರಾಣಸಿವರೆಗೆ ‘ಗಂಗಾ ಯಾನ’ದ ಮೂಲಕ ಪ್ರಚಾರ ನಡೆಸಿದ್ದರು.

About the author

ಕನ್ನಡ ಟುಡೆ

Leave a Comment