ರಾಷ್ಟ್ರ ಸುದ್ದಿ

ಪತ್ರಕರ್ತೆಯರ ಬಗ್ಗೆ ನಿಂದನಾತ್ಮಕ ಬರಹ : ಕ್ಷಮೆಯಾಚಿಸಿದ ಬಿಜೆಪಿ ನಾಯಕ ಎಸ್.ವಿ.ಶೇಖರ್

ಚೆನ್ನೈ:  ತಮಿಳುನಾಡು ರಾಜ್ಯಪಾಲ  ಬನವಾರಿಲಾಲ್‌ ಪುರೋಹಿತ್‌ ಮಹಿಳಾ ಪತ್ರಕರ್ತೆಯ ಕೆನ್ನೆ ಸವರಿ ಸುದ್ದಿಯಾಗಿದ್ದು ಅನಂತರ ತಮ್ಮ ವರ್ತನೆಗಾಗಿ ಕ್ಷಮೆಯಾಚಿಸಿದ್ದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಸುಬ್ರಮಣಿಯನ್‌ ಎಂಬ ಪತ್ರಕರ್ತೆಯ ಕೆನ್ನೆಯನ್ನು ಪುರೋಹಿತ್‌ ಎಲ್ಲರ ಎದುರು ಸವರಿದ್ದರು. ರಾಜ್ಯಪಾಲರ ಈ ವರ್ತನೆಯಿಂದ ತೀವ್ರ ಮಜುಗರಕ್ಕೀಡಾಗಿದ್ದ ಪತ್ರಕರ್ತೆ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯಪಾಲರಿಗೆ ಕಳಿಸಿದ ಇ–ಮೇಲ್‌ನಲ್ಲಿ ‘ನಿಮ್ಮ ಈ ವರ್ತನೆ ನನಗೆ ಮುಜುಗರ ತಂದಿದೆ’ ಎಂದು ಅಸಮಾಧಾನ ಹೊರಹಾಕಿದ್ದರು.

70 ವರ್ಷದ ರಾಜ್ಯಪಾಲರ ವರ್ತನೆ ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಅಲ್ಲದೇ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಿರುವಾಗ ಕೇಂದ್ರದ ಬಿಜೆಪಿ ಸರ್ಕಾರವನ್ನು ಅವಮಾನಿಸುವ ಒಂದೇ ಉದ್ದೇಶದಿಂದ ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್‌  ಅವರು ರಾಜ್ಯಪಾಲರ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಎಸ್. ವಿ. ಶೇಖರ್ ಪತ್ರಕರ್ತೆಯರ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನೊಳಗೊಂಡ ಫೇಸ್‍ಬುಕ್ ಬರಹವೊಂದನ್ನು ಶೇರ್ ಮಾಡಿ ವಿವಾದಕ್ಕೀಡಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲರು ಕೆನ್ನೆ ಸವರಿದ ಬಳಿಕ ಹಲವು ಬಾರಿ ಮುಖತೊಳೆದುಕೊಂಡರೂ ಸಮಾಧಾನವಾಗಲಿಲ್ಲ. ಈಗಲೂ ಆ ಘಟನೆ ಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಮುಜುಗರ ಅನುಭವಿಸುತ್ತಿದ್ದೇನೆ ಎಂದು ಪತ್ರಕರ್ತೆ ಲಕ್ಷ್ಮಿ ಟ್ವೀಟ್‌ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತಿರುಮಲೈ ಎಂಬವರ ಫೇಸ್‍ಬುಕ್ ಪೋಸ್ಟ್ ವೊಂದನ್ನು ಶೇಖರ್ ಶೇರ್ ಮಾಡಿಕೊಂಡಿದ್ದರು.  ಮಧುರೈ ವಿಶ್ವವಿದ್ಯಾಲಯ, ರಾಜ್ಯಪಾಲರು ಮತ್ತು ಕನ್ನೆಯೊಬ್ಬಳ ಕೆನ್ನೆ (‘Madurai University, the Governor and a virgin girl’s cheek) ಎಂಬ ಶೀರ್ಷಿಕೆಯಿರುವ ಪೋಸ್ಟ್ ಅದರಾಗಿತ್ತು.

ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ ?
ಪತ್ರಕರ್ತೆಯರ ಬಗ್ಗೆ ನನಗೆ ಅನುಕಂಪವಿದೆ. ರಾಜ್ಯಪಾಲರು ಆಕೆಯನ್ನು ಮುಟ್ಟಿದ್ದು ಆಕೆಗೆ ಇಷ್ಟವಾಗಲಿಲ್ಲ. ಆಕೆಯ ಟ್ವೀಟ್ ನೋಡಿದರೆ ಅದು ರಾಜ್ಯಪಾಲರನ್ನು ಮತ್ತು  ಮೋದಿಯವರನ್ನು ಗುರಿಯಾಗಿಸಿಕೊಂಡು ಹೇಳಿದಂತಿದೆ. ನಿಜವಾಗಿಯೂ ಆಕೆಯ ಕೆನ್ನೆ ಸವರಿದ ರಾಜ್ಯಪಾಲರು ಅವರ ಕೈಯನ್ನು ಫಿನಾಯಿಲ್‍ನಿಂದ ತೊಳೆಯಬೇಕಿತ್ತು. ಇವರು (ತಮಿಳುನಾಡಿನ ಮಾಧ್ಯಮದವರು) ಕೀಳು ಮತ್ತು ಅಸಹ್ಯ ಜೀವಿಗಳು. ತಮಿಳುನಾಡಿನ ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಅವಿದ್ಯಾವಂತರು, ಕೀಳು ಮಟ್ಟದವರು ಮತ್ತು ಅವರಿಗೆ ಸಾಮಾನ್ಯಜ್ಞಾನ ಇರುವುದಿಲ್ಲ. ಈ  ಮಹಿಳೆ ಕೂಡಾ ಇದರಿಂದ ಭಿನ್ನವಾಗಿಲ್ಲ

About the author

ಕನ್ನಡ ಟುಡೆ

Leave a Comment