ದೇಶ ವಿದೇಶ

ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳು ಬಂದ್:ಕಿಮ್ ಜಾಂಗ್ ಉನ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌‌ರನ್ನು ಭೇಟಿ ಮಾಡಲು ನಿರ್ಧರಿಸಿರುವ ಉತ್ತರ ಕೊರಿಯಾ ನಾಯಕ ಕಿಮ್‌‌ ಜಾಂಗ್ ಉನ್‌‌, ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳು ಹಾಗೂ ಪರಮಾಣು ಪರೀಕ್ಷಾ ಕೇಂದ್ರವನ್ನು ಬಂದ್‌ ಮಾಡಲು ಮುಂದಾಗಿದ್ದಾರೆ.ಪರಮಾಣು ಪರೀಕ್ಷಾ ಕೇಂದ್ರವನ್ನು ಬಂದ್‌ ಮಾಡುವುದಾಗಿ ಉತ್ತರ ಕೊರಿಯಾ ನಾಯಕ ಕಿಮ್‌‌ ಜಾಂಗ್ ಉನ್‌‌ ಘೋಷಿಸಿದ್ದಾರೆ. ಇಂದಿನಿಂದಲೇ ನ್ಯೂಕ್ಲಿಯರ್‌‌ ಟೆಸ್ಟ್‌ನ್ನು ನಿಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಏ.27ರಂದು ಕಿಮ್‌‌ ಜಾಂಗ್ ಉನ್‌‌ ಶೃಂಗಸಭೆಯನ್ನು ಕರೆದಿದ್ದು ಟ್ರಂಪ್‌ ಭಾಗಿಯಾಗಲಿದ್ದಾರೆ. ಉತ್ತರ ಕೊರಿಯಾದ ನಿರ್ಧಾರವನ್ನು ಟ್ರಂಪ್‌‌ ಸ್ವಾಗತಿಸಿದ್ದಾರೆ. ಟ್ವಿಟ್ಟರ್‌ ಮೂಲಕ ಸಂಸತ ವ್ಯಕ್ತಪಡಿಸಿರುವ ಟ್ರಂಪ್‌, ಇದೊಂದು ಗುಡ್‌ ನ್ಯೂಸ್‌ ಎಂದಿದ್ದಾರೆ. ಶೃಂಗಸಭೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಪರಮಾಣು ಹಾಗೂ ಕ್ಷಿಪಣಿ ಪರೀಕ್ಷೆಯನ್ನು ನಿಲ್ಲಿಸಿರುವುದು ದೊಡ್ಡ ಪ್ರಗತಿ. ಉತ್ತರ ಕೊರಿಯಾ ಹಾಗೂ ವಿಶ್ವಕ್ಕೆ ಇದೊಂದು ಒಳ್ಳೆಯ ಸುದ್ದಿ ಎಂದು ಬಣ್ಣಿಸಿದ್ದಾರೆ. ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ಅಧ್ಯಕ್ಷರ ಶೃಂಗಸಭೆ ಬಗ್ಗೆ ಜಪಾನ್‌‌ ಅಸಮಾಧಾನ ವ್ಯಕ್ತಪಡಿಸಿದೆ. ಕಿಮ್‌ ಅವರ ನಿರ್ಧಾರದ ಬಗ್ಗೆ ಜಪಾನ್‌ ಅಸಮಾಧಾನ ವ್ಯಕ್ತಪಡಿಸಿದೆ.

About the author

ಕನ್ನಡ ಟುಡೆ

Leave a Comment