ಅಂಕಣಗಳು ಪರಿಸರ

ಪರಿಸರವನ್ನು ಬೆಳಸಿ, ಜೀವ ಕಾಪಾಡಿ, ಜಗತ್ತು ಉಳಿಸಿ.

ನಮ್ಮ ಜಗತ್ತಿನಲ್ಲಿ ದಿನನಿತ್ಯ ಲಕ್ಷಾಂತರ ಮರಗಿಡಗಳು ನಾಶವನ್ನು  ಹೊಂದುತ್ತಿವೆ ಅದಕ್ಕೆ ಕಾರಣ ಏನೆಲ್ಲಾ ಇರುವುದು ನಮ್ಮಲೆ ಮನುಷ್ಯನು ತನ್ನ ಸ್ವರ್ಥಕ್ಕಾಗಿ ಮರಗಿಡಗಳನ್ನು ಹಾಳುಮಾಡುತ್ತಿದ್ದಾನೆ, ನಮ್ಮ ಮನೆಯ ಉಪಯೋಗಕ್ಕೆ ಬೇಕಾಗುವ ವಸ್ತುಗಳನ್ನು ಪಡೆಯುವಲಿ ಪರಿಸರವನ್ನು ನಾಶಮಾಡುತ್ತಿದ್ದೆವೆ. ಇದರಿಂದಗುವ ದುಷ್ಟಪರಿಣಾಮಗಳ ಬಗ್ಗೆ ನಮಗೆ ಅರಿವಿಲ್ಲದೆ ನಾವು ಪರಿಸರಕ್ಕೆ ಹಾನಿಮಾಡುತ್ತಿದೇವೆ.

ಪರಿಸರ ಹಾಳುಮಾಡುವುದರಿಂದ ನಮ್ಮ ಸುತ್ತಮುತ್ತ ತುಂಬಾ ಅಮಾನವಿಯ ಪರಿಣಮಾವನ್ನು ನಾವು ಮುಂದೆ ಅನುಭವಿಸುವ ಸಿತ್ಥಿಬರುತ್ತದೆ. ಪರಿಸರವನ್ನು ನಾವು  ಉತ್ತಮ ಮಟ್ಟದಲ್ಲಿ ಕಾಪಡಿದಲ್ಲಿ ಭೂಮಿಗೆ ಮಳೆ ಸರಾಗವಾಗಿ ಬರುತ್ತದೆ ಇಲ್ಲದೆ ಹೊಂದರೆ ಭೂಮಿಗೆ ಮಳೆಬಾರದೆ ಧನಕರುಗಳು ಹಾಗೂ ಮನುಷ್ಯನ ಜೀವನದಲ್ಲಿ ವಿಪರಿತ ಪರಿಣಾಮ ಬೀರುತ್ತದೆ.

ಹಾಳು ಮಾಡಿದ್ದ ಪರಿಸರವನ್ನು  ಮತ್ತೆ ಬೆಳೆಸುವ ಭಾವನೆ ಕಿಂತ್ತಿಚು ಕಾಳಜಿ ಯಾರಲ್ಲಿಯೂ ಇಲ್ಲ.ಹಾಗಾಗಿ ಸರ್ಕಾರ ಹಾಗೂ ಅರಣ್ಯ ಇಲಾಖೆಯವರು ಹತ್ತು-ಹಲವಾರು ಕ್ರಮಗಳನ್ನು ಜಾರಿಗೆ ತಂದರೂ  ನಿರೀಕ್ಷಿತ ಬೆಳವಣೆಗೆ ನಮ್ಮ ಜಗತ್ತಿನಲ್ಲಿ  ಕಾಣುತ್ತಿಲ್ಲ. ಅದಕ್ಕೆ ಕಾರಣ ನಾವು ಮತ್ತು ನಮ್ಮ ಮನೋಧೋರಣೆ.ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಯ ಮಕ್ಕಳಿಗೆ ಕೇವಲ ಮರಗಳ ಭಾವಚಿತ್ರಗಳನ್ನು ಮಾತ್ರ ತೋರಿಸ ಬಹುದಾಗಬಹುದು. ಬಹುಃಶ  ಅವುಗಳನ್ನು ನೋಡಲು ಕೊಡಾ ನಮ್ಮ ಪೀಳಿಗೆ ಬದಕಿರುತ್ತಾ  ಎಂಬ ಭಯ ನಮ್ಮ ಮುಂದಿದೆ.

ಪರಿಸರ ರಕ್ಷಣ ಇಲಾಖೆಯು ಮುಂದಿನ ದಿನಗಳಲ್ಲಿ  ಹೊಸದಾಗಿ ವಿಧಿವಿಧಾನಗಳನ್ನು  ಜಾರಿಗೂಳಿಸಬೇಕೆಂದು ವಿನಂತಿ. ಅದೇ ಮರಗಿಡಗಳನ್ನು ನಾಶಮಾಡಲು ಬರುವಂತಹ ವ್ಯಕ್ತಿಗಳಿಗೆ ಒಂದು ಮರವನ್ನು ಕೊಟ್ಟು ಆ ಸಸಿಗಳನ್ನು ನೀಡಿ ಬೆಳೆಸಲು ಮನವೊಲಿಸಬೇಕು. ಇದರಿಂದ ಗೊತ್ತಾಗುತ್ತೆ ನೂರು ಮರಗಳನ್ನು ನಾಶಮಾಡುವಷ್ಟು ಸರಳ ಒಂದು ಮರವನ್ನು ಬೆಳಸಲಾಗದ್ದೆಂದು. ದಯವಿಟ್ಟು ಪರಿಸರವನ್ನು ಕಾಪಾಡಿ ಬೆಳಸಿ ಉಳಸಿ.

About the author

ಕನ್ನಡ ಟುಡೆ

Leave a Comment