ರಾಷ್ಟ್ರ

ಪರೀಕ್ಷೆ ಬರೆಯಲು ಸಹಾಯ ಮಾಡುವ ಭರವಸೆ ನೀಡಿ ಪ್ರಾಂಶುಪಾಲ ರೇಪ್

ಚಂಡೀಗಢ: ಹತ್ತನೇ ತರಗತಿಯ ಬೋರ್ಡ ಪರೀಕ್ಷೆ ಪಾಸು ಮಾಡಿಕೊಳ್ಳುವುದಕ್ಕೆ ನಾನು ನೆರವಾಗುವೆ ಎಂದು ತನ್ನ ಶಾಲೆಯ 16 ವಿದ್ಯಾರ್ಥಿಗಳಿಗೆ ಭರವಸೆ ನೀಡಿರುವ ಶಾಲಾ ಮಾಲಿಕ ಹಾಗೂ ಪ್ರಾಂಶುಪಾಲ ವಿದ್ಯಾರ್ಥಿನಿಯ ಪರವಾಗಿ ದೈಹಿಕ ಶಿಕ್ಷಣ ಪರೀಕ್ಷೆ ಬರೆಯಲು ಬೇರೆ ವಿದ್ಯಾರ್ಥಿಯನ್ನು ಕುಳ್ಳಿರಿಸಿ ತಾನು ಸಮೀಪದ ಮನೆಯೊಂದರಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.

ಈ ಶಾಲೆಯು ಚಂಡೀಗಢದ ಸೋನಿಪತ್ ನ ಗೊಹಾನಾ ಪಟ್ಟಣದ ಹೊರವಲಯದಲ್ಲಿದೆ.ಪೊಲೀಸ್ ಅಧಿಕಾರಿಗಳು ಆರೋಪಿ ಪ್ರಾಂಶುಪಾಲ ಮತ್ತು ಶಾಲೆಯ ಇನ್ನಿಬ್ಬರ ಮಹಿಳಾ  ಸಿಬ್ಭಂದಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌಜನ್ಯ ತಡೆ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಪ್ರಾಂಶುಪಾಲ ಮತ್ತು ಆತನಿಗೆ ಸಹಕರಿಸಿದ ಇಬ್ಬರು ಮಹಿಳಾ ಸಿಬ್ಭಂದಿಗಳು ಈ ಅತ್ಯಾಚಾರ ನೆಡೆದ ಮಂಗಳವಾರ ತಲೆಮರೆಸಿಕೊಂಡಿದ್ದಾರೆ.ಅತ್ಯಾಚಾರಕ್ಕೆ ಗುರಿಯಾದ ವಿದ್ಯಾರ್ಥಿನಿಯ ತಂದೆ ಕೊಟ್ಟ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

 

 

About the author

ಕನ್ನಡ ಟುಡೆ

Leave a Comment