ರಾಷ್ಟ್ರ ಸುದ್ದಿ

ಹಾಲಿ ಸಂಸದ ಪರೇಶ್‌ ರಾವಲ್‌ ಬದಲಿಗೆ ಎಚ್‌.ಎಸ್‌.ಪಟೇಲ್‌ ಅವರಿಗೆ ಟಿಕೆಟ್‌ ನೀಡಿದ ಬಿಜೆಪಿ

ಅಹಮದಾಬಾದ್‌ : ಹಾಲಿ ಸಂಸದ, ಖ್ಯಾತ ನಟ ಪರೇಶ್‌ ರಾವಲ್‌ ಅವರು ಪ್ರತಿನಿಧಿಸುವ ಅಹಮದಾಬಾದ್‌ ಪೂರ್ವ ಕ್ಷೇತ್ರದಲ್ಲಿ ಎಚ್‌.ಎಸ್‌.ಪಟೇಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. 2014 ರಲ್ಲಿ ಪರೇಶ್‌ ರಾವಲ್‌ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಭ್ಯರ್ಥಿಯಾಗಿರುವ ಪಟೇಲ್‌ ಅವರು 2012 ಮತ್ತು 2017 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಟೇಲ್‌ ಸಮುದಾಯದ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಎಚ್‌.ಎಸ್‌.ಪಟೇಲ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಾಗಿದೆ.

About the author

ಕನ್ನಡ ಟುಡೆ

Leave a Comment