ರಾಷ್ಟ್ರ

ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬಿದ್ದ ಪೂನಂ ಕೌರ್

ತಮಿಳುನಾಡು: ಜನಸೇನ ಅವಿರ್ಬಾವ ಮಹಾ ಸಭೆಯಲ್ಲಿ ಪವನ್ ಕಲ್ಯಾಣ್ ಕೆಲ ಪ್ರಸಂಗಗಳಲ್ಲಿ ಪೊಲಿಟಿಕಲ್ ಸರ್ಕಲ್ ಬಳಸಿ ತಮ್ಮ ಹಿಟ್ ಪಂಚ್ ಗಳ ಮೂಲಕ ತೀವ್ರ ವಿರ್ಮಶೆಗೆ ಗುರಿಯಾಗಿದ್ದಾರೆ.ಇದರ ಹಿನ್ನೆಲೆಯಲ್ಲಿ ಅಧಿಕಾರದಲ್ಲಿರುವ “ತೆಲುಗು ದೇಶಂ ಪಾರ್ಟಿ” ಪವನ್ ಬಳಸಿರುವ ಪದಗಳಿಗೆ ಹಾಗೂ ಅವರು ನೀಡಿರುವ ಉಪನ್ಯಾಸಕ್ಕೆ ತೀವ್ರವಾಗಿ ಖಂಡಿಸಿದೆ.

ಒಂದುಕಡೆ ಪವನ್ ಕಲ್ಯಾಣ್ ರವರ ತಾಜಾ ಕಮೆಂಟ್ಸ್ ಗಳಿಗೆ ದೇಶವ್ಯಾಪ್ತಿಯಾಗಿ ಫೇಸ್ ಬುಕ್ ಹಾಗೂ ಟ್ವೆಟ್ಟರ್ ಮೂಲಕ ಪೂನಂ ಕೌರ್ ಅವರು ಸಂಚಲನ ಸೃಷ್ಟಿಸುವ ಪೋಸ್ಟ ಮಾಡಿರುವುದಾಗಿ ತಿಳಿದು ಬಂದಿದೆ.

ಕಾನ್ಸೆಸ್ಟ್ ಹಾಗೂ ಡೈಲಾಗ್ಸ್ ಗಳನ್ನು ಕಾಪಿ ಮಾಡಿ ಬಟ್ಟೆಗಳನ್ನು ಬದಲಾಯಿಸಿದಂತೆ ಮನುಷ್ಯರನ್ನು ಬದಲಾಯಿಸುತ್ತಾ ತಮ್ಮ ಮಾತಿನ ಮೇಲಿ ನಿಲ್ಲದೆ ಜನರು ಇನ್ನೋಸೆನ್ಸ್ ಜೊತೆ ಆಟವಾಡುತ್ತಾ ವೇಷ ಭಾಷೆಗಳನ್ನು ಬದಲಾಯಿಸುವುದರೊಂದಿಗೆ ಮುಗ್ಧ ಜನರನ್ನು ಮೂರ್ಖರನ್ನಾಗಿಸುತ್ತಾ ಹುಡುಗಿಯರನ್ನು ಅಡ್ಡ ಹಾಕಿ ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಿರುವ ಕೆಲವರಿದ್ದಾರೆ ಇಂತವರಿಂದ ನಮ್ಮ ಜನಗಳನ್ನು ಆ ಭಗವಂತನೇ ಕಾಪಡಬೇಕೆಂದು ಮನಸ್ಪೂರ್ತಿಯಾಗಿ ಕೋರಿಕೊಳ್ಳುತ್ತೆನೆಂದು ಪೂನಂ ಅವರು ಪೋಸ್ಟ ಮಾಡಿದ್ದಾರೆ.

ಪೋಸ್ಟ್ ಗೆ ಸಂಭಂದಿಸಿದಂತೆ ಪವನ್ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾವನೆ ಮಾಡಿಲ್ಲವಾದರೂ ಪ್ರತಿ ಮಾತು ಉದ್ದೇಶಿಸಿ ಮಾತನಾಡಿದಂತಿವೆ ಎಂದು ಪವನ್ ಕಲ್ಯಾಣ್ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment