ಸಿನಿ ಸಮಾಚಾರ

ಪವರ್ ಸ್ಟಾರ್ ಪುನೀತ್‌ ರಾಜ್ ಕುಮಾರ ಮುಂದಿನ ಸಿನಿಮಾಗಕ್ಕೆ ಪ್ರಿಯಾಂಕಾ ಜ್ವಾಲಾಕರ್‌ ನಾಯಕಿ

ಬೆಂಗಳೂರು: ಪವನ್‌ ಒಡೆಯರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ 2ನೇ ಹೊಸ ಚಿತ್ರಕ್ಕೆ ತೆಲುಗಿನ ಪ್ರಿಯಾಂಕಾ ಜ್ವಾಲಾಕರ್‌ ನಾಯಕಿಯಾಗಿದ್ದಾರೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಪುನೀತ್‌ ಚಿತ್ರಕ್ಕೆ ಪ್ರಿಯಾಂಕಾ ಆಯ್ಕೆಯಾಗಿದ್ದಾರಂತೆ. ನಿರ್ಮಾಪಕರು ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಆ ಪಾತ್ರಕ್ಕೆ ಪ್ರಿಯಾಂಕಾ ಸೂಕ್ತ ಎಂದು ಆಕೆಯನ್ನು ಆಯ್ಕೆ ಮಾಡಲಾಗಿದೆ.

ಚಿತ್ರಕ್ಕೆ ಪ್ರಿಯಾಂಕಾ ಸಹಿ ಮಾಡಿದ್ದು ಶೀಘ್ರವೇ ಶೂಟಿಂಗ್‌ನಲ್ಲಿ ಪಾಲ್ಗೋಳ್ಳಲಿದ್ದಾರೆ. ಇತ್ತೀಚೆಗಷ್ಟೇ ಮುಹೂರ್ತ ಕಂಡಿರುವ ಈ ಸಿನಿಮಾ ಮಾರ್ಚ್‌ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

About the author

ಕನ್ನಡ ಟುಡೆ

Leave a Comment