ಸಿನಿ ಸಮಾಚಾರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರದ ಮೂಹೂರ್ತ ಸದ್ದುಲಿಲ್ಲದೆ ಸೆಟ್ಟೀರಿದೆ.

ಬೆಂಗಳೊರು: ‘ಅಂಜನಿಪುತ್ರ’ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಪ್ಪು ಹೊಸ ಚಿತ್ರವನ್ನ ಯಾವ ನಿರ್ದೇಶಕ ಮಾಡಲಿದ್ದಾರೆ ಮತ್ತು ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು.

ಈ ಮಧ್ಯೆ ನಿರ್ದೇಶಕ ಶಶಾಂಕ್ ಅವರ ಜೊತೆ ಮಾಡಲಿರುವ ಸಿನಿಮಾ ಮೊದಲು ಸೆಟ್ಟೇರಲಿದೆ ಎನ್ನಲಾಯಿತು. ಮತ್ತೊಂದೆಡೆ ತಮಿಳು ನಿರ್ದೇಶಕ ವೆಟ್ರಿಮಾರನ್ ಅಪ್ಪುಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಯಿತು.

ಇದರ ಜೊತೆ ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಮಾಡಲಿರುವ ಸಿನಿಮಾ ಮೊದಲು ಆರಂಭವಾಗಲಿದೆ ಎನ್ನಲಾಯಿತು. ಆದ್ರೆ, ಇದ್ಯಾವುದು ಅಂತಿಮವಾಗಿರಲಿಲ್ಲ.ಮೊದಲ ದೃಶ್ಯಕ್ಕೆ ಮುನಿರತ್ನ ಕ್ಲಾಪ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು.ರಾಕ್ ಲೈನ್ ಪ್ರೊಡಕ್ಷನ್ಸ್ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಪುನೀತ್ ಹೊಸ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ.

ಇನ್ನು ಈ ಚಿತ್ರವನ್ನ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ನಾಯಕಿ ಯಾರು.? ಇನ್ನು ನಾಯಕಿಯನ್ನ ಅಂತಿಮ ಮಾಡಿಲ್ಲ. ಇನ್ನುಳಿದಂತೆ ಚಿತ್ರದ ಕಲಾವಿದರನ್ನ ಕೂಡ ಆಯ್ಕೆ ಮಾಡಿಕೊಂಡಿಲ್ಲ. ಮಾರ್ಚ್ 8 ರಿಂದ ಸಿನಿಮಾ ಚಿತ್ರೀಕರಣ ಮಾಡಲಿರುವ ಚಿತ್ರತಂಡ ಅಷ್ಟರೊಳಗೆ ಕಲಾವಿದರನ್ನ ಆಯ್ಕೆಮಾಡಲಿದೆ.

ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಇನ್ನು ಪುನೀತ್ ಮತ್ತು ರಾಕ್ ಲೈನ್ ವೆಂಕಟೇಶ್ ಜುಗಲ್ ಬಂದಿಯ ಈ ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಸಂಗೀತ ನಿರ್ದೇಶಕ ಡಿ ಇಮ್ಮನ್ ಹಾಡುಗಳನ್ನ ಸಂಯೋಜನೆ ಮಾಡಲಿದ್ದಾರೆ.

About the author

ಕನ್ನಡ ಟುಡೆ

Leave a Comment