ಅ೦ತರಾಷ್ಟ್ರೀಯ

ಪಾಕಿಸ್ತಾನಕ್ಕೆ ಅಸಹಿಷ್ಣು ರಾಷ್ಟ್ರ ಕಳಂಕ ಪಟ್ಟ

ವಾಷಿಂಗ್ಟನ್‌: ಜನರ ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ರಾಷ್ಟ್ರಗಳ ವಾರ್ಷಿಕ ಪಟ್ಟಿಗೆ ಪಾಕಿಸ್ತಾನದ ಹೆಸರು ಸೇರಿಕೊಂಡಿದೆ. ಅಮೆರಿಕ ಈ ಕುರಿತು ಪಟ್ಟಿ ತಯಾರಿಸಿದ್ದು, ಪಾಕ್‌ ಧರ್ಮಾಂಧ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಲಾಗಿದೆ.

”ಟ್ರಂಪ್‌ ಆಡಳಿತದ ಈ ಕ್ರಮ ಕೆಚ್ಚಿನ ನಿರ್ಧಾರವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ನಾಗರಿಕ ಮತ್ತು ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಪಾಕಿಸ್ತಾನ ನಿರಂತರ ವೈಫಲ್ಯ ಕಂಡಿದೆ. ಹಾಗಾಗಿ ಇದರ ಹೊಣೆಯನ್ನು ಇಸ್ಲಾಮಾಬಾದ್‌ಗೆ ಹೊರಿಸಿರುವುದು ಸೂಕ್ತವಾಗಿದೆ,” ಎಂದು ಜಾಗತಿಕ ಮಾನವ ಹಕ್ಕುಗಳ ಉಪ ಸಮಿತಿಯ ಅಧ್ಯಕ್ಷ, ಅಮೆರಿಕ ಸಂಸದ ಕ್ರಿಸ್‌ ಸ್ಮಿತ್‌ ಅಭಿಪ್ರಾಯಪಟ್ಟಿದ್ದಾರೆ.

”ಈ ಕ್ರಮ ಪಾಕಿಸ್ತಾನದಲ್ಲಿ ನೆಲೆಸಿರುವ ಶಿಯಾ, ಹಿಂದೂ, ಕ್ರೈಸ್ತ, ಅಹ್ಮದಿ ಮತ್ತು ಇತರ ಅಲ್ಪಸಂಖ್ಯಾತರ ಪರ ಧ್ವನಿಯಾಗಲಿದೆ. ಆ ದೇಶದಲ್ಲಿ ಇವರ ಉಪಸ್ಥಿತಿ ಧಾರ್ಮಿಕ ಉಗ್ರತ್ವದ ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಲಿದೆ,” ಎಂದು ಸ್ಮಿತ್‌ ಹೇಳಿದ್ದಾರೆ.

ಇತರೆ ದೇಶಗಳ ಹೆಸರು : ಈ ಪಟ್ಟಿಯಲ್ಲಿ ಪಾಕಿಸ್ತಾನದ ಜತೆಗೆ ಚೀನಾ, ಸೌದಿ ಅರೇಬಿಯ, ಮ್ಯಾನ್ಮಾರ್‌, ಎರಿಟ್ರಿಯಾ, ಇರಾನ್‌, ಉತ್ತರ ಕೊರಿಯಾ, ಸುಡಾನ್‌, ತಜಕಿಸ್ತಾನ್‌ ಮತ್ತು ತುರ್ಕ್‌ಮೇನಿಸ್ತಾನ್‌ ಸೇರಿವೆ. ಅಮೆರಿಕದ ಈ ಕ್ರಮವನ್ನು ಪಾಕಿಸ್ತಾನ ಖಂಡಿಸಿದೆ.

About the author

ಕನ್ನಡ ಟುಡೆ

Leave a Comment