ರಾಷ್ಟ್ರ ಸುದ್ದಿ

ಪಾಕಿಸ್ತಾನದ ಜೈಷ್ ಸಂಘಟನೆಯ ಅಡಗು ದಾಣಗಳ ಮೇಲೆ ವೈಮಾನಿಕ ದಾಳಿ: 200 ಉಗ್ರರು ಮಟಾಶ್

ನವದೆಹಲಿ: ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಸರಿ ಸುಮಾರು 200 ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಗಡಿ ನಿಯಂತ್ರಣ ರೇಖೆಯಾಚೆ ಇರುವ ಬಲಾಕೋಟ್, ಚಕೋತಿ ಮತ್ತು ಮುಜಾಫರ್ಬಾದ್ ನಲ್ಲಿದ್ದ ಉಗ್ರರ ನೆಲೆಗಳು ವೈಮಾನಿಕ ದಾಳಿಯಲ್ಲಿ ಸಂಪೂರ್ಣ ನಾಶವಾಗಿವೆ, ಜೈಷೆ ಸಂಘಟನೆಯ ನಿಯಂತ್ರಣ ಕೊಠಡಿ ಕೂಡಾ ಧ್ವಂಸ ವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಕಳೆದ ರಾತ್ರಿ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆಜಿ ಬಾಂಬ್ ದಾಳಿ ಮಾಡಿದ್ದು ಪರಿಣಾಮ 500 ಮೀಟರ್ ಪ್ರದೇಶ ಸಂಪೂರ್ಣ ಸರ್ವನಾಶವಾಗಿದೆ ಎಂದು ತಿಳಿದುಬಂದಿದೆ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕಂಟ್ರೋಲ್ ರೂಂಗಳು ಧ್ವಂಸ ಮಾಡಿದೆ. ಒಟ್ಟು 1000 ಕೆಜಿಯ 10 ಬಾಂಬ್ ಗಳನ್ನು ಬಾಲಾಕೋಟ್, ಮುಜಾಫ್ಪರಾಬಾದ್ ಚಾಕೋಟಿಯಲ್ಲಿ ಏರ್ ಸ್ಟ್ರೈಕ್ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment