ಅ೦ತರಾಷ್ಟ್ರೀಯ

ಪಾಕಿಸ್ತಾನದ ಹಾಂಗುವಿನಲ್ಲಿ ಸ್ಪೋಟ: 25 ಜನರ ದುರ್ಮರಣ

ಹಾಂಗು: ಪಾಕಿಸ್ತಾನದ ಖೈಬರ್  ಪಾಕುಂಖ್ವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 25 ಜನರು ದುರ್ಮರಣ ಹೊಂದಿದ್ದು, ಡಜನ್ ಗೂ ಅಧಿಕ ಮಂದಿ ತೀವ್ರ ವಾಗಿ ಗಾಯಗೊಂಡಿದ್ದಾರೆ. ಧಾರ್ಮಿಕ ಸೆಮಿನರ್ ನಡೆಯುತ್ತಿದ್ದ ಪ್ರದೇಶದ ಹೊರಗಡೆ ಈ ಸ್ಟೋಟ ಸಂಭವಿಸಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ  ಜಿಯೋ ಟಿವಿ ವರದಿ ಮಾಡಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಡೀ ಪ್ರದೇಶ ಭದ್ರತಾ ಪಡೆಗಳಿಂದ ಸುತ್ತುವರೆದಿದ್ದು, ತನಿಖೆ ಆರಂಭವಾಗಿದೆ.ಪಾಕಿಸ್ತಾನದಲ್ಲಿ ಇಂದು ಸಂಭವಿಸಿರುವ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುಂಚೆ ಚೀನಾದ ರಾಯಬಾರಿ ಕಚೇರಿ ಬಳಿ ಹೊರಗಡೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment