ಅ೦ತರಾಷ್ಟ್ರೀಯ

ಪಾಕಿಸ್ತನ: ಅಣ್ಣ ನವಾಜ್ ಷರೀಫ್ ಬಂಧಮುಕ್ತ, ತಮ್ಮ ಷರೀಫ್ ಬಂಧನ

ಇಸ್ಲಾಮಾಬಾದ್: ವಸತಿ ಹಗರಣ ಪ್ರಕರಣದಲ್ಲಿ ಪಾಕಿಸ್ತನದ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)  ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ನ್ನು ಬಂಧಿಸಲಾಗಿದೆ.
ಸುಮಾರು 14 ಬಿಲಿಯನ್ ರೂಪಾಯಿ ಮೌಲ್ಯದ ವಸತಿ ಹಗರಣದ ತನಿಖೆ ನಡೆಸುತ್ತಿದ್ದ ಭ್ರಷ್ಟಾಚರ ನಿಗ್ರಹ ವಿಭಾಗ ಶೆಹಬಾಜ್ ಷರೀಫ್ ನ್ನು ಬಂಧಿಸಿದೆ. ಈ ಬಗ್ಗೆ ನ್ಯಾಷನಲ್ ಅಕೌಂಟೆಬಲಿಟಿ ಬ್ಯೂರೋ(ಎನ್ಎಬಿ) ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಸತ್ ನಲ್ಲಿ ವಿಪಕ್ಷ ನಾಯಕನಾಗಿರುವ ಶೆಹಬಾಜ್ ಷರೀಫ್ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ಲಾಹೋರ್ ನಲ್ಲಿ ಅಶಿಯಾನಾ ವಸತಿ ಯೋಜನೆಯಲ್ಲಿ ಅಕ್ರಮಗಳನ್ನು ಎಸಗಿರುವ ಆರೋಪ ಕೇಳಿಬಂದಿದೆ. ಬಡವರಿಗೆ ವಸತಿ ಕಲ್ಪಿಸಲು ಉದ್ದೇಶಿಸಲಾಗಿದ್ದ ಯೋಜನೆ ಭ್ರಷ್ಟಾಚಾರದಿಂದಾಗಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ವಿಭಾಗ ತನಿಖೆ ಪ್ರಾರಂಭಿಸಿತ್ತು. ಪ್ರಕರಣದಲ್ಲಿ ಶೆಹಬಾಜ್ ಷರೀಫ್ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಸೆ.07 ರಂದು ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ.

About the author

ಕನ್ನಡ ಟುಡೆ

Leave a Comment