ರಾಷ್ಟ್ರ

ಪಾಕಿಸ್ತಾನ ಐಎಸ್ಐ ಗೂಢಚಾರಿಯ ಬಂಧನ ಮಾಡಿದ ಭದ್ರತಾ ಪಡೆಗಳು

ಪಂಜಾಬ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಒಬ್ಬನನ್ನು ಭದ್ರತಾ ಪಡೆಗಳು ಪಂಜಾಬ್ ನ ಅಮೃತಸರ್ ನಲ್ಲಿ ಬಂಧಿಸಿದೆ. ರಾಜ್ಯ ವಿಶೇಷ ಕಾರ್ಯಾಚರಣೆ ಪಡೆ ಹಾಗೂ ಮಿಲಿಟರಿ ಗುಪ್ತಚರ  ಸಂಸ್ಥೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಗೂಢಚಾರನನ್ನು ಬಂಧಿಸಲಾಗಿದೆ.

ಆರೋಪಿಯಿಂದ ಸೈನ್ಯದ ವಾಹನಗಳ ಛಾಯಾಚಿತ್ರಗಳು ಕೈಯಲ್ಲಿ ಬರೆದ ನಿರ್ಬಂಧಿತ ಪ್ರದೇಶಗಳ ನಕಾಶೆಗಳು ಸೈನ್ಯದ ತರಬೇತಿ ಕೈಪಿಡಿಗಳ ಪ್ರತಿಗಳನ್ನು ಮಿಲಿಟರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಭಾರತೀಯಸೇನೆಯ ಎಲ್ಲಾ ಪ್ರಮುಖ ಚಲನವಲನಗಳನ್ನು ತಿಳಿಸಲು ಈತನನ್ನು ಪಾಕಿಸ್ತಾನ ಐಎಸ್ಐ ಸಂಸ್ಥೆ ಏಳು ತಿಂಗಳ ಹಿಂದೆ ನೇಮಕ ಮಾಡಿತ್ತು. ದುಬೈ ಮೂಲಕ ಅಕ್ರಮ ಹಣ ವರ್ಗಾವಣೆ ಕೆಲಸದಲ್ಲಿ ಈ ಗೂಢಚಾರಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಅಧಿಕೃತ ಸೀಕ್ರೆಟ್ಸ್ ಆಕ್ಟ್ ಸೇರಿ ಭಾರತೀಯ ದಂಡ ಸಂಹಿತೆಯು ಇತರ  ಕಾಯ್ದೆಗಳಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

 

 

About the author

ಕನ್ನಡ ಟುಡೆ

Leave a Comment