ಅ೦ತರಾಷ್ಟ್ರೀಯ

ಪಾಕಿಸ್ತಾನ ಪೋಷಣೆಗೆ ಮಾಸ್ಟರ್ ಪ್ಲಾನ್: ಅತ್ಯಾಧುನಿಕ 48 ಮಿಲಿಟರಿ ಡ್ರೋಣ್ ಮಾರಾಟ ಮಾಡಲು ಚೀನಾ ಮುಂದು

ಬೀಜಿಂಗ್: ಪಾಕಿಸ್ತಾನ ಪೋಷಣೆಗೆ ಮಾಸ್ಟರ್ ಪ್ಲಾನ್ ರೂಪಿಸುವ ಚೀನಾ, ರಾಷ್ಟ್ರ ರಷ್ಯಾದೊಂದಿಗೆ ಭಾರತ ಎಸ್-400 ಒಪ್ಪಂದಕ್ಕೆ ಸಹಿ ಹಾಕಿರುವ ಬೆನ್ನಲ್ಲೇ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್’ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನಕ್ಕೆ ಮಾರಾಟ ಮಾಡಲು ಚೀನಾ ನಿರ್ಧರಿಸಿರುವ ಈ ಅತ್ಯಾಧುನಿಕ ಡ್ರೋಣ್ ಗಳು ಎಲ್ಲಾ ಮಾದರಿಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವುಳ್ಳವಾಗಿವೆ. ಪಾಕಿಸ್ತಾನ ಹಾಗೂ ಚೀನಾ ನಡುವೆ ನಡೆಯುತ್ತಿರುವ ಈ ಒಪ್ಪಂದದ ಮಾತ್ರ ಈ ವರೆಗೂ ಎಲ್ಲಿಯೂ ಬಹಿರಂಗವಾಗಿಲ್ಲ. ಚೀನಾದ ಈ ಅತ್ಯಾಧುನಿಕ ಡ್ರೋಣ್ ಮಾರಾಟ ಕುರಿತಂತೆ ಸ್ವತಃ ಪಾಕಿಸ್ತಾನ ವಾಯುಸೇನೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನ ವಾಯುಸೇನೆಯಲ್ಲಿ ಇದು ಅತ್ಯಂತ ದೊಡ್ಡ ಒಪ್ಪಂದ ಎಂದು ಹೇಳಿಕೊಂಡಿದೆ. ಪ್ರಸ್ತುತ ಚೀನಾ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿರುವ ಡ್ರೋಣ್’ನನ್ನು ವಿಂಗ್ ಲೂಂಗ್ 2 ಎಂದು ಹೇಳಲಾಗುತ್ತಿದ್ದು, ಇದು ಅತ್ಯಾಧುನಿಕ ಡ್ರೋಣ್ ಆಗಿದೆ. ಉತ್ತಮ ರೀತಿಯ ಸ್ಥಳಾನ್ವೇಷಣೆ, ಮಾನವ ರಹಿತ ವಿಮಾನ ವ್ಯವಸ್ಥೆಯನ್ನು ಈ ಡ್ರೋಣ್ ಹೊಂದಿದ್ದು, ಚೆಂಗ್ಡು ಏರ್’ಕ್ರಾಫ್ಟ್ ಇಂಡಸ್ಟ್ರಿಯಲ್ (ಗ್ರೂಪ್) ಕಂಪನಿ ಈ ಡ್ರೋಣ್ ಗಳನ್ನು ತಯಾರಿಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಪಾಕಿಸ್ತಾನಕ್ಕೆ ಡ್ರೋಣ್ ಗಳನ್ನು ಮಾರಾಟ ಮಾಡುತ್ತಿರುವ ಕುರಿತಂತೆ ಕಂಪನಿ ದೃಢಪಡಿಸಿಲ್ಲ.
ರಷ್ಯಾದೊಂದಿಗೆ ಎಸ್-400 ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ವಾಯುಸೇನಾ ವಿಭಾಗದಲ್ಲಿ ಮತ್ತಷ್ಟು ಶಕ್ತಿಶಾಲಿಯಾಗುತ್ತಿದ್ದು, ಇದು ಇದೀಗ ಚೀನಾಗೆ ಭಯ ಹುಟ್ಟಿದೆ. ಇದೇ ಕಾರಣಖ್ಕೆ ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯಕ್ಕೆ ಚೀನಾ ಮುಂದಾಗಿದೆ ಎಂಬ ಮಾತುಗಳು ಇದೀಗ ಕೇಳಿ ಬರತೊಡಗಿವೆ.

About the author

ಕನ್ನಡ ಟುಡೆ

Leave a Comment